ಉಡುಪಿ: ದೊಡ್ಡಣಗುಡ್ಡೆ ಎ.ವಿ.ಬಾಳಿಗಾ ಆಸ್ಪತ್ರೆಯಲ್ಲಿ ನರ್ಸಿಂಗ್ ವಿದ್ಯಾರ್ಥಿಗಳಿಗಾಗಿ ಆಟಿಸಂ ಸ್ಪೆಕ್ಟ್ರಮ್ ಕುರಿತು ಕಾರ್ಯಾಗಾರ

ಉಡುಪಿ: ದೊಡ್ಡಣಗುಡ್ಡೆ ಎ.ವಿ.ಬಾಳಿಗಾ ಆಸ್ಪತ್ರೆಯಲ್ಲಿ ನರ್ಸಿಂಗ್ ವಿದ್ಯಾರ್ಥಿಗಳಿಗಾಗಿ ಆಟಿಸಂ ಸ್ಪೆಕ್ಟ್ರಮ್ ಕುರಿತು ಕಾರ್ಯಾಗಾರ

 


ಉಡುಪಿ:  ಆಟಿಸಂ ಸೊಸೈಟಿ ಆಫ್ ಉಡುಪಿ, ರೋಟರಿ ಕ್ಲಬ್ ಮಣಿಪಾಲ, ಡಾ ಎ  ವಿ ಬಾಳಿಗಾ ಸ್ಮಾರಕ ಆಸ್ಪತ್ರೆ ಉಡುಪಿ,ಕಮಲ್ ಎ ಬಾಳಿಗಾ ಚಾರಿಟೇಬಲ್ ಟ್ರಸ್ಟ್ ಮುಂಬೈ, ಮಣಿಪಾಲದ ಆಶ್ರಿತ್ ಕಾಲೇಜ್ ಆಫ್ ನರ್ಸಿಂಗ್, ಮತ್ತು ಮಣಿಪಾಲದ ಆರೋಗ್ಯ ವೃತ್ತಿಪರರ ಕಾಲೇಜು ಸಹಯೋಗದೊಂದಿಗೆ  ನರ್ಸಿಂಗ್ ವಿದ್ಯಾರ್ಥಿಗಳಿಗಾಗಿ ಆಟಿಸಂ ಸ್ಪೆಕ್ಟ್ರಮ್ ಅಸ್ವಸ್ಥತೆಗಳ ಕುರಿತು ಕಾರ್ಯಾಗಾರವನ್ನು ಉಡುಪಿಯ ಡಾ. ಎ.ವಿ. ಬಾಳಿಗಾ ಸ್ಮಾರಕ ಆಸ್ಪತ್ರೆಯ ಕಮಲ್ ಎ ಬಾಳಿಗಾ ಸಭಾಂಗಣದಲ್ಲಿ ನಡೆಸಲಾಯಿತು. ಡಾ. ಎ.ವಿ. ಬಾಳಿಗಾ ಸ್ಮಾರಕ ಆಸ್ಪತ್ರೆಯ ನಿರ್ದೇಶಕರಾದ ಡಾ. ಪಿ.ವಿ. ಭಂಡಾರಿ ಕಾರ್ಯಕ್ರಮವನ್ನು ಉದ್ಘಾಟಿಸಿ ಇಂತಹ ಜಾಗೃತಿ ಕಾರ್ಯಕ್ರಮಗಳ ಅವಶ್ಯಕತೆ ಕುರಿತು ಮಾತನಾಡಿದರು. ರೋಟೇರಿಯನ್ ಶಶಿಕಲಾ ರಾಜವರ್ಮ ಅಧ್ಯಕ್ಷೆ ರೋಟರಿ ಕ್ಲಬ್ ಮಣಿಪಾಲ ಮತ್ತು  ಮೆಲ್ವಿನ್ ಅತಿಥಿಗಳಾಗಿದ್ದರು. ಡಾ. ಸುಪ್ರಿಯಾ, ಡಾ. ಸುನಿಲ ಜಾನ್, ಕೇಶವ್ ರಾಮ್ ಸಂಪನ್ಮೂಲ ವ್ಯಕ್ತಿಗಳಾಗಿದ್ದರು. ಮಣಿಪಾಲದ ಆಕ್ಯುಪೇಶನಲ್ ಥೆರಪಿ ವಿಧ್ಯಾರ್ಥಿಗಳಿಂದ ಆಟಿಸಂ ಕುರಿತು ಕಿರು ನಾಟಕ ಇತ್ತು.ಉಡುಪಿಯ ಆಟಿಸಂ ಸೊಸೈಟಿಯ ಅಧ್ಯಕ್ಷ ಡಾ. ವಿರೂಪಾಕ್ಷ ದೇವರಮನೆ ಸ್ವಾಗತಿಸಿದರು ಮತ್ತು ಕೀರ್ತೇಶ್ ಧನ್ಯವಾದಗಳನ್ನು ಅರ್ಪಿಸಿದರು. ಬೇಬಿ ಶ್ರಾವಣಿ ಕಾರ್ಯಕ್ರಮಕ್ಕೆ ಪ್ರಾರ್ಥಿಸಿದರು, ಸಫಾನ್ ಕಾರ್ಯಕ್ರಮ ನಿರೂಪಿಸಿದರು.

Ads on article

Advertise in articles 1

advertising articles 2

Advertise under the article