
ಶಿರೂರು: ಈದ್ ಮಿಲಾದ್ ಮೆರವಣಿಗೆಗೆ ಹಿಂದೂ ಬಾಂಧವರಿಂದ ಸಿಹಿ ತಿಂಡಿ ವಿತರಣೆ ಮೂಲಕ ಸೌಹಾರ್ದ ಸಂದೇಶ
05/09/2025 05:58 AM
ಬೈಂದೂರು: ಇಂದು ಪ್ರವಾದಿ ಮಹಮ್ಮದ್ ಪೈಗಂಬರ್ ಅವರ 1500 ನೇ ಜನ್ಮ ದಿನಾಚರಣೆ.ಈ ಪ್ರಯುಕ್ತ ಜಿಲ್ಲೆಯಾದ್ಯಂತ ಮುಸ್ಲಿಂ ಬಾಂಧವರು ಈದ್ ಮಿಲಾದ್ ಆಚರಣೆ ಮಾಡುತ್ತಿದ್ದಾರೆ. ಬೈಂದೂರು ತಾಲೂಕು ಶಿರೂರು ಭಾಗದ ಅಲ್ಪಸಂಖ್ಯಾತ ಬಾಂಧವರ ಈದ್ ಮಿಲಾದ್ ಮೆರವಣಿಗೆ ಸಂದರ್ಭ ಹಿಂದೂ ಸಮಾಜ ಬಾಂಧವರು ಸಿಹಿ ತಿಂಡಿ ಹಂಚುವ ಮೂಲಕ ಸೌಹಾರ್ದತೆ ಮೆರೆದರು.ಸ್ಥಳೀಯ ಮುಖಂಡ ವೀರಭದ್ರ ಗಾಣಿಗ ಮತ್ತು ದಲಿತ ಸಮಾಜದ ಮುಖಂಡರ ನೇತೃತ್ವದಲ್ಲಿ ಸಿಹಿ ತಿಂಡಿ ಹಂಚುವುದರ ಮೂಲಕ ಶಾಂತಿ ಸೌಹಾರ್ದತೆ ಸಾರಲಾಯಿತು.ಈ ದೇಶ ಸರ್ವಧರ್ಮಗಳ ಶಾಂತಿಯ ನೆಲೆಬೀಡು ಎಂಬ ಕುವೆಂಪು ವಚನದಂತೆ ಸೌಹಾರ್ದತೆ ಸಾರಿದ ಅಪೂರ್ವ ಕ್ಷಣಕ್ಕೆ ಇದು ಸಾಕ್ಷಿಯಾಯಿತು.