
ಉಡುಪಿ: ಅರ್ಹರಿಗೆ ಹೊಸ ಪಡಿತರ ಚೀಟಿ ವಿತರಣೆಗೆ ಕ್ರಮ ವಹಿಸಿ- ಮುಖ್ಯಮಂತ್ರಿಗೆ ಸಾಮಾಜಿಕ ಕಾರ್ಯಕರ್ತ ಪವನ್ ಕುಮಾರ್ ಶಿರ್ವ ಪತ್ರ
ಉಡುಪಿ: ಪ್ರಸ್ತುತ ಸುಮಾರು ನಾಲ್ಕು ವರ್ಷಗಳಿಂದ ಬಿ.ಪಿ.ಎಲ್ ಮತ್ತು ಎ.ಪಿ.ಎಲ್ ರೇಷನ್ ಕಾರ್ಡ್ ಹೊಸದಾಗಿ ಮಾಡಲು ಅವಕಾಶ ಸಿಗುತ್ತಿಲ್ಲ.ಈಗಾಗಲೇ ಕೆಲವಾರು ಬಾರಿ ತಿದ್ದುಪಡಿಗೆ ಅವಕಾಶ ಸಿಗುತ್ತಿದೆ.ಆದರೆ ಹೊಸ ರೇಷನ್ ಕಾರ್ಡ್ ಗೆ ಅವಕಾಶ ಇಲ್ಲದೆ ಶಾಲಾ ಮಕ್ಕಳಿಗೆ ಶಾಲಾ ಶಿಕ್ಷಣಕ್ಕೆ ದಾಖಾಲಾತಿ ಮಾಡುವ ಸಂದರ್ಭದಲ್ಲಿ ಸರಿಯಾದ ದಾಖಲೆ ಇಲ್ಲದೆ ಸಮಸ್ಯೆಯಾಗುತ್ತಿದೆ. ಸಾರ್ವಜನಿಕರಿಗೆ ಸರ್ಕಾರದ ಸವಲತ್ತು ಪಡೆಯಲು ರೇಷನ್ ಕಾರ್ಡ್ ಕಡ್ಡಾಯ ಆದ ಕಾರಣ ಅದರಿಂದ ತುಂಬಾ ಸಾರ್ವಜನಿಕರು ವಂಚಿತರಾಗಿದ್ದಾರೆ.ಈಗಾಗಲೇ ಸರ್ಕಾರದಿಂದ ಆಯುಷ್ಮಾನ್ ಭಾರತ್ ಎಂಬ ಒಂದು ಬಡವರಿಗೆ ಒಳ್ಳೆಯ ವೈದ್ಯಕೀಯ ಸೇವೆ ಪಡೆಯುವಲ್ಲಿ ಸರ್ಕಾರ ಒಳ್ಳೆಯ ಯೋಜನೆಯನ್ನು ಮಾಡಿದೆ.ಆದರೆ ಆ ಪ್ರಯೋಜನವನ್ನು ಪಡೆಯ ಬೇಕಾದರೆ ರೇಷನ್ ಕಾರ್ಡ್ ಕಡ್ಡಾಯವಾಗಿರುತ್ತದೆ.ಆದ್ದರಿಂದ ಆದಷ್ಟು ಬೇಗ ಈ ಸಮಸ್ಯೆಗೆ ಮುಕ್ತಿ ಸಿಕ್ಕಿ ಸಾರ್ವಜನಿಕರಿಗೆ ಯಾವುದೇ ತೊಂದರೆಗಳಿಲ್ಲದೆ ರೇಷನ್ ಕಾರ್ಡ್ ಗೆ ಹೊಸ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಬೇಕೆಂದು ಸಾಮಾಜಿಕ ಕಾರ್ಯಕರ್ತ ಪವನ್ ಕುಮಾರ್ ಶಿರ್ವ ಅವರು ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಬರೆದಿರುತ್ತಾರೆ.