
ಉಡುಪಿ: ಕಾಂಗ್ರೆಸ್ ಸಾಮಾಜಿಕ ಜಾಲತಾಣ ಮುಖ್ಯಸ್ಥ ರೋಷನ್ ಶೆಟ್ಟಿ ವಿರುದ್ಧ ಬಿಜೆಪಿ ಯುವ ಮೋರ್ಚಾದಿಂದ ಕೋಟ ಠಾಣೆಯಲ್ಲಿ ದೂರು
12/09/2025 07:07 AM
ಉಡುಪಿ: ಫೇಸ್ ಬುಕ್ ನಲ್ಲಿ ದೇಶವಿರೋಧಿ ಪೋಸ್ಟರ್ ಹಂಚಿಕೊಂಡಿರುವ ಕಾಂಗ್ರೆಸ್ ಸಾಮಾಜಿಕ ಜಾಲತಾಣ ಮುಖ್ಯಸ್ಥ ರೋಷನ್ ಶೆಟ್ಟಿ ವಿರುದ್ಧ ಬಿಜೆಪಿ ಯುವ ಮೋರ್ಚಾ ದೂರು ದಾಖಲಿಸಿದೆ.ಕೋಟ ಠಾಣೆಯಲ್ಲಿ ಈ ದೂರು ದಾಖಲಿಸಲಾಗಿದೆ.
ರೋಷನ್ ಶೆಟ್ಟಿ ಹಾಕಿರುವ ಪೋಸ್ಟರ್ , ಪಕ್ಕದ ರಾಷ್ಟ್ರ ಬಾಂಗ್ಲಾ , ಶ್ರೀಲಂಕಾ ,ನೇಪಾಳದಲ್ಲಿ ಜನ ದಂಗೆ ಎದ್ದಿದ್ದಾರೆ.ಮುಂದಿನ ಸರದಿ ಭಾರತದ್ದು ಎಂಬ ಅರ್ಥದಲ್ಲಿ ಈ ಪೋಸ್ಟರ್ ಹಂಚಿಕೊಂಡಿದ್ದರು. ಪ್ರದಾನಿಯನ್ನು ಜನ ಓಡಿಸುವ ರೀತಿಯಲ್ಲಿ ಈ ಪೋಸ್ಟರ್ ಇತ್ತು. ಇದು ಒಂದು ರೀತಿ ದೇಶ ವಿರೋಧಿ ಕೃತ್ಯವಾಗಿದ್ದು ಇದರ ವಿರುದ್ಧ ಕೋಟ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದೇವೆ.ಈ ಬಗ್ಗೆ ಪೊಲೀಸರು ಕ್ರಮ ತೆಗೆದುಕೊಳ್ಳಬೇಕು ,ಆತನನ್ನು ಬಂಧಿಸಬೇಕು ಎಂದು ಯುವ ಮೋರ್ಚಾದ ಪೃಥ್ವಿರಾಜ್ ಶೆಟ್ಟಿ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಒತ್ತಾಯ ಮಾಡಿದ್ದಾರೆ.