ಭೋವಿ ಜನಾಂಗದವರು ಜಾತಿ -ಭೋವಿ ,ಉಪಜಾತಿ- ವಡ್ದರ ಎಂದು ಬರೆಸಿಕೊಳ್ಳಿ- ಪವನ್ ಕುಮಾರ್ ಶಿರ್ವ

ಭೋವಿ ಜನಾಂಗದವರು ಜಾತಿ -ಭೋವಿ ,ಉಪಜಾತಿ- ವಡ್ದರ ಎಂದು ಬರೆಸಿಕೊಳ್ಳಿ- ಪವನ್ ಕುಮಾರ್ ಶಿರ್ವ

 


ಉಡುಪಿ: ರಾಜ್ಯ ಸರ್ಕಾರ ಸೆ.22ರಿಂದ ನಡೆಸಲು ಉದ್ದೇಶಿಸಿರುವ ಸಾಮಾಜಿಕ, ಶೈಕ್ಷಣಿಕ ಗಣತಿಯನ್ನು ರಾಜ್ಯದಲ್ಲಿನ 7 ಕೋಟಿ ಜನರ ಸಮೀಕ್ಷೆಯಾಗುವವರೆಗೂ ಸಹಾ ನಡೆಸಬೇಕು, ಇದಕ್ಕೆ ಯಾವುದೇ ರೀತಿಯಲ್ಲಿ ಕಾಲಮಿತಿಯನ್ನು ಹಾಕುವುದು ಬೇಡ, ಈ ಸಮೀಕ್ಷೆಯಿಂದ ಯಾರೂ ಸಹಾ ಹೊರಗುಳಿಯದಂತೆ ನೋಡಿಕೊಳ್ಳಬೇಕಿದೆ ಎಂದು ಪವನ್ ಕುಮಾರ್ ಶಿರ್ವ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ನಮ್ಮ ಸಮುದಾಯದವರೆಲ್ಲರೂ ಸಹ ಜಾತಿ ಭೋವಿ ಅಥವಾ ವಡ್ಡರ ಎಂದು ಬರೆಸುವುದರ ಮೂಲಕ ನಮ್ಮ ಸಂಘಟನೆ ಪ್ರದರ್ಶನ ಮಾಡಬೇಕಿದೆ. ನಮ್ಮ ಸಮುದಾಯ ಅರೆಅಲೆಮಾರಿಯಾಗಿದ್ದು ಕೆಲಸದ ನಿಮಿತ್ತ ಊರನ್ನು ಬಿಟ್ಟು ಹೋಗಿರುತ್ತಾರೆ. ಈ ಸಮಯದಲ್ಲಿ ಊರಿನಲ್ಲಿ ಇರುವುದರ ಮೂಲಕ ಗಣತಿದಾರರು ಬಂದಾಗ ಸರಿಯಾದ ರೀತಿಯಲ್ಲಿ ಮಾಹಿತಿಯನ್ನು ನೀಡುವುದರ ಮೂಲಕ ಭೋವಿ ಸಮುದಾಯದ ಸರಿಯಾದ ರೀತಿಯಲ್ಲಿ ಸಂಖ್ಯೆಯನ್ನು ನಮೂದಿಸಬೇಕಿದೆ ಎಂದು ಈ ಮೂಲಕ ಭೋವಿ ಸಮಾಜದ ಮುಖಂಡ ಪವನ್ ಕುಮಾರ್ ಶಿರ್ವ ತಿಳಿಸಿದ್ದಾರೆ.

Ads on article

Advertise in articles 1

advertising articles 2

Advertise under the article