
ಕುಂದಾಪುರ: ಅಡಮಾನ ಇರಿಸಿದ್ದ ಫ್ಲ್ಯಾಟ್ ಮಾರಾಟ ಮಾಡಿ ವಂಚನೆ- ಪ್ರಕರಣ ದಾಖಲು
10/09/2025 04:16 PM
ಕುಂದಾಪುರ: ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್ ಕುಂದಾಪುರ ಶಾಖೆಯಲ್ಲಿ ಅಡಮಾನ ಇರಿಸಿದ್ದ ಫ್ಲ್ಯಾಟ್ ಅನ್ನು ಮಾರಾಟ ಮಾಡಿ ಬ್ಯಾಂಕಿಗೆ ವಂಚಿಸಿರುವ ಕುರಿತು ಮರವಂತೆಯ ಮೊಹಮ್ಮದ್ ಶಾಕಿರ್ (39) ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ.
ಆರೋಪಿಯು ಕೋಟೇಶ್ವರ ಗ್ರಾಮದ 'ಜ್ಯೂಲಿ ಯೋ ರೆಸಿಡೆನ್ಸಿ' ನೆಲಮಹಡಿಯಲ್ಲಿರುವ ಅಪಾರ್ಟ್‌ಮೆಂಟ್ ನಂಬ್ರ 7ನ್ನು ಅಡಮಾನವಿರಿಸಿ 55 ಲಕ್ಷ ರೂ. ಸಾಲ ಪಡೆದುಕೊಂಡಿದ್ದ. ಮೂಲ ದಾಖಲೆಗಳು ಬ್ಯಾಂಕ್‌ನಲ್ಲಿರುವಾಗಲೇ ನಕಲಿ ದಾಖಲೆಗಳನ್ನು ಸೃಷ್ಟಿಸಿ ಬಡಗುಬೆಟ್ಟು ಕೋ ಆಪರೇಟಿವ್ ಸೊಸೈಟಿಯ ಮಣಿಪಾಲ ಶಾಖೆಯಲ್ಲಿ 45 ಲಕ್ಷ ರೂ. ಸಾಲ ಪಡೆಯಲು ಯತ್ನಿಸಿದಾಗ ಅಲ್ಲಿನ ಅಧಿಕಾರಿಗಳ ಗಮನಕ್ಕೆ ಬಂದು ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.