
ಉಡುಪಿ: ಸೆ.7ರಂದು ಯುವಕ ಮಂಡಲ ಪೆರಂಪಳ್ಳಿ ವತಿಯಿಂದ 17ನೇ ವರ್ಷದ "ಮುದ್ದುಕೃಷ್ಣ ಸ್ಪರ್ಧೆ"
05/09/2025 02:55 PM
ಉಡುಪಿ: ಯುವಕ ಮಂಡಲ ಪೆರಂಪಳ್ಳಿ ಇದರ ವತಿಯಿಂದ 17ನೇ ವರ್ಷದ "ಮುದ್ದುಕೃಷ್ಣ ಸ್ಪರ್ಧೆ" ಇದೇ ಸೆ.7ರ ಭಾನುವಾರ ಮಧ್ಯಾಹ್ನ 3.30ಕ್ಕೆ ಪೆರಂಪಳ್ಳಿ ಯುವಕ ಮಂಡಲದ ದಿ. ಮಂಜುನಾಥ್ ಶಿವತ್ತಾಯ ರಂಗಮಂಟಪದಲ್ಲಿ ನಡೆಯಲಿದೆ.
3 ವರ್ಷದೊಳಗಿನ ಮಕ್ಕಳು ಹಾಗೂ 3ರಿಂದ 6ವರ್ಷದೊಳಗಿನ ಮಕ್ಕಳು ಈ ಎರಡು ವಿಭಾಗಗಳಲ್ಲಿ ಸ್ಪರ್ಧೆ ಜರುಗಲಿದ್ದು, ಮೂರು ನಿಮಿಷಗಳ ಕಾಲಾವಕಾಶ ನೀಡಲಾಗುವುದು. ಯಶೋಧೆಯಾಗಿ ಪೋಷಕರು ಭಾಗವಹಿಸಬಹುದು. ಆದರೆ ಕಡ್ಡಾಯವಲ್ಲ. ಯಶೋಧೆಯನ್ನು ಅಂಕಗಳಿಗೆ ಪರಿಗಣಿಸಲಾಗುವುದಿಲ್ಲ. ಸ್ಪರ್ಧಾಳುಗಳು ಸ್ಪರ್ಧೆ ನಡೆಯುವ ಅರ್ಧ ಗಂಟೆಗೆ ಮುಂಚಿತವಾಗಿ ಆಗಮಿಸಿ ಹೆಸರು ನೊಂದಾಯಿಸಬೇಕು. ಎರಡು ವಿಭಾಗಗಳಲ್ಲಿ ಪ್ರಥಮ 3ಸಾವಿರ, ದ್ವಿತೀಯ 2 ಸಾವಿರ ಹಾಗೂ ತೃತೀಯ 1000 ನಗದು ಬಹುಮಾನ ನೀಡಲಾಗುವುದು. ಹೆಚ್ಚಿನ ಮಾಹಿತಿಗೆ ಶಶಾಂಕ ಶಿವತ್ತಾಯ ಮೊಬೈಲ್ ಸಂಖ್ಯೆ 96326 01459, ರಕ್ಷಿತ್ ಕೋಟ್ಯಾನ್ ಮೊಬೈಲ್ ಸಂಖ್ಯೆ 89717 54938, ಸುಮಂತ್ ಅಮೀನ್ ಮೊಬೈಲ್ ಸಂಖ್ಯೆ 87220 20740 ಅನ್ನು ಸಂಪರ್ಕಿಸಬಹುದು ಎಂದು ಯುವಕ ಮಂಡಲದ ಪ್ರಕಟಣೆ ತಿಳಿಸಿದೆ.