
ನವದೆಹಲಿ: ಇಂದು ಸಂಜೆ 5 ಗಂಟೆಗೆ ರಾಷ್ಟ್ರವನ್ನುದ್ದೇಶಿಸಿ ಪ್ರದಾನಿ ಮೋದಿ ಭಾಷಣ
ನವದೆಹಲಿ: ಇಂದು ಸಂಜೆ 5 ಗಂಟೆಗೆ ರಾಷ್ಟ್ರವನ್ನುದ್ದೇಶಿಸಿ ಪ್ರದಾನಿ ಮೋದಿ ಭಾಷಣ
ನವದೆಹಲಿ: ಸೆ.22 ನಾಡಹಬ್ಬ ದಸರಾ ಆರಂಭಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಇಂದು(ಸೆ.21) ಸಂಜೆ 5 ಗಂಟೆಗೆ ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ. ಪ್ರಧಾನಿಯವರ ಭಾಷಣವು ಜಿಎಸ್ಟಿ ಸುಧಾರಣೆಯ ಮೇಲೆ ಕೇಂದ್ರೀಕರಿಸುವ ಸಾಧ್ಯತೆಯಿದೆ ಎಂದು ಮಾಧ್ಯಮ ವರದಿಗಳು ಹೇಳಿವೆ.
ಹೊಸ ಜಿಎಸ್ಟಿ 2.0 ದರಗಳು ನಾಳೆಯಿಂದ ದೇಶದಲ್ಲಿ ಜಾರಿಗೆ ಬರಲಿವೆ. ಅಮೆರಿಕ ಭಾರತೀಯ ವಸ್ತುಗಳ ಮೇಲೆ ಸುಂಕ ಹೆಚ್ಚಳ ಮಾಡಿರುವುದು, ನಂತರ H1 B ವೀಸಾ ಹೊಂದಿರುವವರ ಮೇಲೆ ಅಮೆರಿಕ ಕೈಗೊಂಡಿರುವ ಕಠಿಣ ಕ್ರಮದಂತಹ ವಿದ್ಯಾಮಾನಗಳ ನಡುವೆ ಪ್ರಧಾನಿಯವರು ಇಂದು ದೇಶವನ್ನುದ್ದೇಶಿಸಿ ಮಾತನಾಡುತ್ತಿದ್ದಾರೆ.
ಅಮೆರಿಕವು ಭಾರತದ ಮೇಲೆ ಶೇ.50ರಷ್ಟು ಆಮದು ಶುಲ್ಕವನ್ನು ವಿಧಿಸಿದೆ. ಅಷ್ಟೇ ಅಲ್ಲದೆ ಎಚ್1ಬಿ ವೀಸಾದ ಶುಲ್ಕವನ್ನು 1 ಲಕ್ಷ ಡಾಲರ್ಗೆ ಹೆಚ್ಚಿದೆ. ಇದು ವಾರ್ಷಿಕ ಶುಲ್ಕವಲ್ಲ, ಬದಲಿಗೆ ಒಂದು ಬಾರಿ ಪಾವತಿಸುವ ಶುಲ್ಕ, ಹಾಗೆಯೇ ಈಗಾಗಲೇ ವೀಸಾ ಪಡೆದು ಬೇರೆ ದೇಶಕ್ಕೆ ಹೋಗಿರುವವರಿಗೆ ಈಗಾಗಲೇ ಅರ್ಜಿ ಸಲ್ಲಿಸಿರುವವರಿಗೆ ಅನ್ವಯವಾಗುವುದಿಲ್ಲ.ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸುಂಕ ಬೆದರಿಕೆಗಳು ಮತ್ತು ಯುಎಸ್ H-1B ವೀಸಾ ಅರ್ಜಿ ಶುಲ್ಕ ಹೆಚ್ಚಳದ ಮಧ್ಯೆ, ನವರಾತ್ರಿಯ ಮೊದಲ ದಿನದಂದು ಭಾರತ GST ದರ ಕಡಿತವನ್ನು ಜಾರಿಗೆ ತರಲು ಸಿದ್ಧವಾಗಿರುವ ನಿರ್ಣಾಯಕ ಸಮಯದಲ್ಲಿ ಪ್ರಧಾನಿ ಮೋದಿಯವರು ಭಾಷಣ ಮಾಡುತ್ತಿದ್ದಾರೆ.