
ಮಣಿಪಾಲ: ತಡರಾತ್ರಿ ಭೀಕರ ರಸ್ತೆ ಅಪಘಾತ; ಬೈಕ್ ಕಮರಿಗೆ ಬಿದ್ದು ಯುವಕ ಮೃತ್ಯು- ಮತ್ತೋರ್ವ ಗಂಭೀರ
07/09/2025 09:21 AM
ಉಡುಪಿ: ಬೈಕ್‌ವೊಂದು ಸ್ಕಿಡ್ ಆಗಿ ಸಹಸವಾರ ಸ್ಥಳದಲ್ಲೇ ಮೃತಪಟ್ಟು, ಸವಾರ ಗಂಭೀರ ಗಾಯಗೊಂಡ ಘಟನೆ ಮಣಿಪಾಲ- ಅಲೆವೂರು ರಸ್ತೆಯ ಮಂಚಿ ಇಳಿಜಾರಿನ ತಿರುವಿನಲ್ಲಿ ಶನಿವಾರ ತಡರಾತ್ರಿ ಸಂಭವಿಸಿದೆ.
ಮೃತ ಸಹಸವಾರನನ್ನು ಕಟಪಾಡಿ ನಿವಾಸಿ ಮೋಹನ್ (33) ಎಂದು ಗುರುತಿಸಲಾಗಿದೆ. ಬೈಕ್ ಸವಾರ ಪ್ರದೀಪ್ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರು ಶನಿವಾರ ತಡರಾತ್ರಿ ಕಾಪುವಿನಿಂದ ಮಣಿಪಾಲ ಕಡೆಗೆ ಹೋಗಿ ಹಿಂದಿರುಗಿ ಬರುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಬೈಕ್ ಸ್ಕಿಡ್ ಆದ ರಭಸಕ್ಕೆ ಸಹಸವಾರ ಪೊದೆಗೆ ಎಸೆಯಲ್ಪಟ್ಟಿದ್ದು, ಬೆಳಿಗ್ಗೆಯವರೆಗೆ ಯಾರು ನೋಡದ ಕಾರಣ ಸ್ಥಳದಲ್ಲೆ ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ.