ಬ್ರಹ್ಮಾವರ : ಮಾದಕ ದ್ರವ್ಯ ಸಾಗಾಟದ ಆರೋಪಿ ಪಿ.ಐ.ಟಿ. ಎನ್.ಡಿ.ಪಿ.ಎಸ್. ಕಾಯ್ದೆಯಡಿ ಬಂಧನ-ಧಾರವಾಡ ಜೈಲಿಗೆ ರವಾನೆ

ಬ್ರಹ್ಮಾವರ : ಮಾದಕ ದ್ರವ್ಯ ಸಾಗಾಟದ ಆರೋಪಿ ಪಿ.ಐ.ಟಿ. ಎನ್.ಡಿ.ಪಿ.ಎಸ್. ಕಾಯ್ದೆಯಡಿ ಬಂಧನ-ಧಾರವಾಡ ಜೈಲಿಗೆ ರವಾನೆ

 


ಬ್ರಹ್ಮಾವರ: ಮಾದಕ ದ್ರವ್ಯ ಸಾಗಾಟ ಮತ್ತು ಮಾರಾಟ ಪ್ರಕರಣಗಳಲ್ಲಿ ನಿರಂತರವಾಗಿ ಭಾಗಿಯಾಗಿ ಸಮಾಜದ ಸ್ವಾಸ್ಥ್ಯವನ್ನು ಹಾಳುಗೆಡಹುತ್ತಿದ್ದ ಆರೋಪಿ ಬ್ರಹ್ಮಾವರ ಠಾಣಾ ವ್ಯಾಪ್ತಿ ಕೃಷ್ಣ ಆಚಾರಿ  (43 ) ಯನ್ನು  ಪಿ.ಐ.ಟಿ. ಎನ್.ಡಿ.ಪಿ.ಎಸ್. ಕಾಯ್ದೆಯಡಿ ಬಂಧಿಸಲಾಗಿದೆ. ಈ ಹಿನ್ನೆಲೆಯಲ್ಲಿ ಆರೋಪಿಯನ್ನು ಧಾರವಾಡ ಕೇಂದ್ರ ಕಾರಾಗೃಹಕ್ಕೆ ಕಳಿಸಲಾಗಿದೆ. ಆರೋಪಿಗೆ 20/05/2025ರಿಂದ 01 ವರ್ಷದ ವರೆಗೆ ಬಂಧನ ಆದೇಶ ನೀಡಲಾಗಿದೆ. ಬಂಧಿತನ ವಿರುದ್ಧ ಒಟ್ಟು 4 ಪ್ರಕರಣ ದಾಖಲಾಗಿದ್ದು, ಅವುಗಳಲ್ಲಿ 2 ಪ್ರಕರಣಗಳಲ್ಲಿ ಸಜೆಯಾಗಿದ್ದು, ಇನ್ನುಳಿದ 2 ಪ್ರಕರಣಗಳು ನ್ಯಾಯಾಲಯದ ವಿಚಾರಣೆಯಲ್ಲಿದೆ.

Ads on article

Advertise in articles 1

advertising articles 2

Advertise under the article