
ಹೊಸದಿಲ್ಲಿ: ಮತಗಳ್ಳತನ ವಿರುದ್ಧ ಪ್ರತಿಭಟನೆ ,ಪಾದಯಾತ್ರೆ- ರಾಹುಲ್ ಗಾಂಧಿ ಸಹಿತ ಹಲವರು ಪೊಲೀಸರ ವಶಕ್ಕೆ
11/08/2025 07:26 AM
ಹೊಸದಿಲ್ಲಿ : ಮತಗಳ ಕಳ್ಳತನ ಆರೋಪ ಮತ್ತು ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಖಂಡಿಸಿ ಚುನಾವಣಾ ಆಯೋಗದ ಪ್ರಧಾನ ಕಚೇರಿಗೆ ಮೆರವಣಿಗೆ ನಡೆಸುತ್ತಿದ್ದ ವಿಪಕ್ಷಗಳ ಸಂಸದರನ್ನು ದಿಲ್ಲಿ ಪೊಲೀಸರು ತಡೆದಿದ್ದಾರೆ.
ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಸೇರಿದಂತೆ ವಿರೋಧ ಪಕ್ಷದ ಸಂಸದರು ಸಂಸತ್ತಿನ ಮಕರ ದ್ವಾರದಿಂದ ಭಾರತೀಯ ಚುನಾವಣಾ ಆಯೋಗದ ಕಚೇರಿಗೆ ಮೆರವಣಿಗೆ ಸಾಗಿದ್ದಾರೆ. ಈ ವೇಳೆ ಬ್ಯಾರಿಕೇಡ್‌ಗಳನ್ನು ಹಾಕಿ ಪೊಲೀಸರು ತಡೆದಿದ್ದು, ಕೆಲ ಸಂಸದರ ಬ್ಯಾರಿಕ್ಯಾಡ್ ಮೇಲೆ ಹತ್ತಿ ಮುಂದಕ್ಕೆ ಸಾಗಲು ಪ್ರಯತ್ನಿಸಿದ್ದಾರೆ.
ರಾಹುಲ್ ಸಹಿತ ಹಲವರು ವಶಕ್ಕೆ
ಮೆರವಣಿಗೆ ವೇಳೆ ಲೋಕಸಭೆಯ ವಿಪಕ್ಷದ ನಾಯಕ ರಾಹುಲ್ ಗಾಂಧಿ ಸೇರಿದಂತೆ ಹಲವು ಸಂಸದರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.