
ಉಡುಪಿ: ಮಹೇಶ್ ಶೆಟ್ಟಿ ತಿಮರೋಡಿಗೆ ಬೆಂಬಲಿಗರ ಜೈಕಾರ...!
21/08/2025 07:32 AM
ಉಡುಪಿ: ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿಯನ್ನು ದ್ವೇಷಭಾಷಣ ಸಂಬಂಧ ಬ್ರಹ್ಮಾವರ ಪೊಲೀಸರು ವಶಕ್ಕೆ ಪಡೆದಿದ್ದಾರೆ.ಉಜಿರೆಯಿಂದ ಬ್ರಹ್ಮಾವರ ಠಾಣೆಗೆ ತಿಮರೋಡಿ ಖಾಸಗಿ ಕಾರಿನಲ್ಲಿ ವಕೀಲರೊಂದಿಗೆ ಬರುತ್ತಿದ್ದಾರೆ.ಜೊತೆಯಲ್ಲಿ ಪೊಲೀಸ್ ವಾಹನಗಳೂ ಇವೆ.ಕಾರ್ಕಳ ಮೂಲಕ ಹಾದು ಹೋಗುವಾಗ ತಿಮರೋಡಿ ಬೆಂಬಲಿಗರು ಕೈಬೀಸಿ ,ಜೈ ಮಹೇಶಣ್ಣ ,ಜೈ ಸೌಜನ್ಯ ಎಂದು ಘೋಷಣೆ ಕೂಗುತ್ತಿರುವ ದೃಶ್ಯ ವೈರಲ್ ಆಗುತ್ತಿದೆ.