
ಧರ್ಮಸ್ಥಳದಲ್ಲಿ ಸರ್ಕಾರ ಏನು ಮಾಡುತ್ತಿದೆ ? ಇದೇನು ತನಿಖೆಯೋ ? ದೊಂಬಿಯೋ ? ಸುನಿಲ್ ಕುಮಾರ್ ಪ್ರಶ್ನೆ
07/08/2025 04:03 AM
ಉಡುಪಿ: ಧರ್ಮಸ್ಥಳ ವಿಚಾರದಲ್ಲಿ ಸರ್ಕಾರ ಏನು ಮಾಡುತ್ತಿದೆ ?ಇದೇನು ತನಿಖೆಯೋ ? ದೊಂಬಿಯೋ? ಹಿಂದೂ ಶ್ರದ್ಧಾ ಕೇಂದ್ರದ ಮೇಲೆ ನಡೆಯುತ್ತಿರುವ ಯೋಜಿತ ಅಪಪ್ರಚಾರದಲ್ಲಿ ಕಾಂಗ್ರೆಸ್ ಸರ್ಕಾರ ಯೂ ಟ್ಯೂಬರ್ ಗಳು ಹಾಗೂ ಅನ್ಯಮತೀಯರ ಕೈಗೊಂಬೆಯಾಗಿ ಕುಣಿಯುತ್ತಿದೆಯೇ ? ನಾಡಿನ ಪ್ರಮುಖ ವಾಹಿನಿಯ ಮೇಲೆ, ಸ್ಥಳೀಯ ನಾಗರಿಕರ ಮೇಲೆ ಈ ಹೋರಾಟಗಾರರ ಸೋಗಿನ ವ್ಯಕ್ತಿಗಳು ಹಲ್ಲೆ, ಗೂಂಡಾಗಿರಿ ಮಾಡುತ್ತಿದ್ದರೂ ಪೊಲೀಸ್ ಇಲಾಖೆ ಏನು ಮಾಡುತ್ತಿದೆ ? ಸಹನೆಗೂ ಒಂದು ಮಿತಿ ಇದೆ. ಮೌನವನ್ನು ದೌರ್ಬಲ್ಯ ಎಂದು ಪರಿಗಣಿಸಬೇಡಿ ಎಂದು ಮಾಜಿ ಸಚಿವ ,ಶಾಸಕ ವಿ ಸುನಿಲ್ ಕುಮಾರ್ ಎಕ್ಸ್ ನಲ್ಲಿ ಪ್ರಶ್ನೆ ಮಾಡಿದ್ದಾರೆ.