
ಕಾರ್ಕಳ:ರಾಜ್ಯಸಭಾ ಸದಸ್ಯ, ಕಾಂಗ್ರೆಸ್ ಅಲ್ಪಸಂಖ್ಯಾತ ಸಮಿತಿ ರಾಷ್ಟ್ರೀಯ ಅಧ್ಯಕ್ಷ ಇಮ್ರಾನ್ ಪ್ರತಾಪ್'ಗಢಿ ಹುಟ್ಟುಹಬ್ಬ ಪ್ರಯುಕ್ತ ಸುರಕ್ಷಾ ಸೇವಾಶ್ರಮಕ್ಕೆ ದಿನಸಿ ವಸ್ತುಗಳ ವಿತರಣೆ
07/08/2025 03:55 AM
ಕಾರ್ಕಳ: ರಾಜ್ಯಸಭಾ ಸದಸ್ಯ ಮತ್ತು ಕಾಂಗ್ರೆಸ್ ಅಲ್ಪಸಂಖ್ಯಾತ ಸಮಿತಿಯ ರಾಷ್ಟ್ರೀಯ ಅಧ್ಯಕ್ಷರಾದ ಇಮ್ರಾನ್ ಪ್ರತಾಪ್'ಗಢಿಯವರ ಹುಟ್ಟುಹಬ್ಬವನ್ನು ಕೆಪಿಸಿಸಿ ಅಲ್ಪಸಂಖ್ಯಾತ ಸಮಿತಿಯ ಪ್ರಧಾನ ಕಾರ್ಯದರ್ಶಿ ಡಾ. ಶೇಕ್ ವಾಹಿದ್ ದಾವೂದ್ ರವರು ಕಾರ್ಕಳದ ಸುರಕ್ಷಾ ಸೇವಾಶ್ರಮಕ್ಕೆ ದಿನಸಿ ವಸ್ತುಗಳನ್ನು ವಿತರಣೆ ಮಾಡುವುದರ ಮೂಲಕವಾಗಿ ಆಚರಿಸಿದರು.ಈ ಸಂದರ್ಭ ಮೌಲಾನಾ ಅಬ್ದುಲ್ ಹಫೀಝ್ ಕಾರ್ಕಳ ,ಅಬ್ಬಾಸ್ ಸಾಹೇಬ್ ಕಾರ್ಕಳ ಮತ್ತು ಉದ್ಯಮಿ ಮಹಮ್ಮದ್ ಸಾದಿಕ್ ಮತ್ತಿತರರು ಉಪಸ್ಥಿತರಿದ್ದರು.