ಉಡುಪಿ:ಸಿ.ಎಸ್.ಐ ಲೋಂಬಾರ್ಡ್ ಮೆಮೋರಿಯಲ್ ಆಸ್ಪತ್ರೆಯಲ್ಲಿ ಸ್ವಾತಂತ್ರ್ಯೋತ್ಸವ ಪ್ರಯುಕ್ತ ರಕ್ತದಾನ ಶಿಬಿರ

ಉಡುಪಿ:ಸಿ.ಎಸ್.ಐ ಲೋಂಬಾರ್ಡ್ ಮೆಮೋರಿಯಲ್ ಆಸ್ಪತ್ರೆಯಲ್ಲಿ ಸ್ವಾತಂತ್ರ್ಯೋತ್ಸವ ಪ್ರಯುಕ್ತ ರಕ್ತದಾನ ಶಿಬಿರ

 

ಉಡುಪಿ: ಸಿ.ಎಸ್.ಐ ಲೋಂಬಾರ್ಡ್ ಮೆಮೋರಿಯಲ್ ಆಸ್ಪತ್ರೆಯಲ್ಲಿ ಆಗಸ್ಟ್ 15 ರಂದು ರಕ್ತದಾನ ಶಿಬಿರವನ್ನು ಆಯೋಜಿಸಲಾಯಿತು.ಈ ಶಿಬಿರದಲ್ಲಿ 75ಕ್ಕೂ ಹೆಚ್ಚು ಉತ್ಸಾಹಿ ದಾನಿಗಳು ಭಾಗವಹಿಸಿದ್ದು ಇದು ಮಾನವೀಯತೆ ಮತ್ತು ಸಹಾಯದ ಸ್ಫೂರ್ತಿಗೆ ಸಾಕ್ಷಿಯಾಗಿದೆ. ಸಂಗ್ರಹಿಸಲಾದ ಪ್ರತಿಯೊಂದು ರಕ್ತದ ಯೂನಿಟ್ ಕೂಡ ಅಪಘಾತದ ಬಲಿಗಳಿಗೆ, ಶಸ್ತ್ರಚಿಕಿತ್ಸೆಗೆ ಒಳಗಾಗುವ ರೋಗಿಗಳಿಗೆ ಹಾಗೂ ಪ್ರಾಣಾಪಾಯದ ಕಾಯಿಲೆಗಳಿಗೆ ತುತ್ತಾದವರಿಗೆ ಸಹಾಯವಾಗಲಿದೆ. ಕಾರ್ಯಕ್ರಮವನ್ನು ರೆವೆ. ರಚೇಲ್ ಡಿ'ಸಿಲ್ವ ಪ್ರಾರ್ಥನೆಯೊಂದಿಗೆ ಆರಂಭಿಸಿದರು.ಅತಿಥಿಗಳು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಮುಖ್ಯ ಅತಿಥಿಯಾಗಿದ್ದ ಇಂದ್ರಾಳಿ ಜಯಕರ ಶೆಟ್ಟಿ, ಬಡಗಬೆಟ್ಟು ಕ್ರೆಡಿಟ್ ಸೊಸೈಟಿಯ ಅಧ್ಯಕ್ಷರು ಮಾತನಾಡಿ, 'ಆಸ್ಪತ್ರೆಯು ಸಾರ್ವಜನಿಕರ ಕಲ್ಯಾಣಕ್ಕಾಗಿ ಹಲವಾರು ಶಿಬಿರಗಳನ್ನು ಆಯೋಜಿಸುತ್ತಿದ್ದು, ಆಸ್ಪತ್ರೆಯ ಇತ್ತೀಚಿನ ಬೆಳವಣಿಗೆಗಳು ಶ್ಲಾಘನೀಯವಾಗಿದೆ" ಎಂದು ಹೇಳಿದರು.

ಮಿಸ್ಟರ್ ಜಯಕರ ಶೆಟ್ಟಿ, ಕುಂದಾಪುರದ ರೆಡ್ ಕ್ರಾಸ್ ಬ್ಲಡ್ ಬ್ಯಾಂಕ್‌ ಅಧ್ಯಕ್ಷರು, "ರಕ್ತದಾನ ಎನ್ನುವುದು ಬದುಕು ನೀಡುವ ದಾನವಾಗಿದೆ. ಪ್ರತಿಯೊಬ್ಬ ದಾನಿಗೂ ನಾವು ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸುತ್ತೇವೆ" ಎಂದು ಹೇಳಿದರು.

ಸಂತೋಷ್ ಕುಮಾರ್, ಅಧ್ಯಕ್ಷರು - ಲಯನ್ಸ್ ಕ್ಲಬ್ ಚೇತನ ಉಡುಪಿ,ಅರುಣ್ ಕುಮಾ‌ರ್ ಶೆಟ್ಟಿ, ಅಧ್ಯಕ್ಷರು- ಕಲಾಕಿರಣ ಕ್ಲಬ್ ಬೈಲೂರ್ ಉಡುಪಿ ,ಡಾ. ತಿಲಕ್ ಚಂದ್ರಪಾಲ್, ಅಧ್ಯಕ್ಷರು- ಉಡುಪಿ ರನ್ನರ್ಸ್ ಕ್ಲಬ್ (ರಿ)ಶೇಖ್ ಫಯಾಜ್, ಅಧ್ಯಕ್ಷರು - ಬ್ಲಡ್ ಹೆಲ್ಸ್ ಕೇರ್, ಕರ್ನಾಟಕ (ರಿ) ಡೀನಾ ಪ್ರಭಾವತಿ, ಆಡಳಿತಾಧಿಕಾರಿ, ಎ.ಒ., ಲೋಂಬಾರ್ಡ್ ಮೆಮೋರಿಯಲ್ ಆಸ್ಪತ್ರೆಚಾಪ್ಲಿನ್ ರವ. ರಚೇಲ್ ಡಿಸಿಲ್ವಾ - ಈ ಎಲ್ಲ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ತರಬೇತಿ ಪಡೆದ ವೈದ್ಯಕೀಯ ಸಿಬ್ಬಂದಿಯು ಸಂಪೂರ್ಣ ಶಿಬಿರವನ್ನು ಸುರಕ್ಷಿತ ಹಾಗೂ ಶಿಸ್ತುಬದ್ಧ ರೀತಿಯಲ್ಲಿ ನಡೆಸಿದರು. ರಕ್ತದಾನಿಗಳಿಗು ಧನ್ಯತೆಯ ಪ್ರಮಾಣಪತ್ರ ಹಾಗೂ ತಂಪಾದ ಪಾನೀಯಗಳೊಂದಿಗೆ ಉಡುಗೊರೆ ನೀಡಲಾಯಿತು.ಪಿ.ಆ‌ರ್.ಓ ರೋಹಿ ರತ್ನಾಕ‌ರ್ ಸ್ವಾಗತಿಸಿದರು. ಉಪ ಪ್ರಾಂಶುಪಾಲರಾದ ಡಾ. ನಾರಾಯಣ ಪೆರಲಾಯ ವಂದಿಸಿದರು.

-- ಡಾ. ಸುಶೀಲ್ ಜತನ್ನಾ ,ನಿರ್ದೇಶಕರು, ಲೋಂಬಾರ್ಡ್ ಮೆಮೋರಿಯಲ್ ಆಸ್ಪತ್ರೆ

Ads on article

Advertise in articles 1

advertising articles 2

Advertise under the article