ಉಡುಪಿ: ಹಾಜಿ ಅಬ್ದುಲ್ಲಾ ಅವರಿಗೆ ನುಡಿನಮನ

ಉಡುಪಿ: ಹಾಜಿ ಅಬ್ದುಲ್ಲಾ ಅವರಿಗೆ ನುಡಿನಮನ

 


ಉಡುಪಿ: ಖಾನ್ ಬಹದ್ದೂರ್ ಹಾಜಿ ಅಬ್ದುಲ್ಲಾ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ಉಡುಪಿ ಇದರ​ ವತಿಯಿಂದ ಕಾರ್ಪೊರೇಷನ್ ಬ್ಯಾಂಕ್ ಸ್ಥಾಪಕ ಹಾಜಿ ಅಬ್ದುಲ್ಲಾ ಸಾಹೇಬ್ ಅವರ ಪುಣ್ಯತಿಥಿಯಂದು ಉಡುಪಿಯ ಹೆರಿಟೇಜ್ ಕಾಯಿನ್ ಮ್ಯೂಸಿಯಂನಲ್ಲಿ ಅವರಿಗೆ ಗೌರವ ಸಲ್ಲಿಸಿತು.

ಭಾರತದ ಸ್ವಾತಂತ್ರ್ಯ ದಿನಾಚರಣೆಯಲ್ಲಿ 'ಕರಾವಳಿ ಕರ್ನಾಟಕದ ಗಾಂಧಿ ಪ್ರಭಾವ' ಕುರಿತು ಸಂಶೋಧನೆ ನಡೆಸುತ್ತಿರುವ ಮೈಸೂರು ವಿಶ್ವವಿದ್ಯಾಲಯದ ಡಾಕ್ಟರೇಟ್ ಸಂಶೋಧನಾ ವಿದ್ಯಾರ್ಥಿನಿ ಬಾಗ್ಯಾ ರಾಜೇಶ್ ಮಾತನಾಡಿ ,ಗಾಂಧೀಜಿ ಮಂಗಳೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸ್ವಾಗತ ಸಮಿತಿಯ ಅಧ್ಯಕ್ಷರಾಗಿದ್ದ ಹಾಜಿ ಅಬ್ದುಲ್ಲಾ ಸಾಹೇಬ್ ಅವರ ಭಾಗವಹಿಸುವಿಕೆ ಮತ್ತು ಹೋರಾಟದಲ್ಲಿ ವಹಿಸಿದ ಪಾತ್ರವನ್ನು ನೆನಪಿಸಿಕೊಂಡರು.

ಟ್ರಸ್ಟಿನ ಅಧ್ಯಕ್ಷ​  ಪ್ರಸಿದ್ಧ ಮನೋವೈದ್ಯ ಡಾ. ಪಿ ವಿ ಭಂಡಾರಿ ಮಾತನಾಡಿ, ಹಾಜಿ ಅಬ್ದುಲ್ಲಾ ಅವರು ಸಮಾಜಕ್ಕೆ ನೀಡಿದ ಕೊಡುಗೆಯನ್ನು ವಿವರವಾಗಿ ತಿಳಿಸಿದರು.

​ಈ ಸಂದರ್ಭದಲ್ಲಿ ಉಡುಪಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರವಿರಾಜ್ ಎಚ್‌. ಪಿ., ಗೌರವ ಕಾರ್ಯದರ್ಶಿ ಜನಾರ್ದನ್ ಕೊಡವೂರು, ಸಂಘಟನಾ ಕಾರ್ಯದರ್ಶಿ ಸತೀಶ್ ಕೊಡವೂರು, ವಸ್ತು ಸಂಗ್ರಹಾಲಯದ ಮಾಜಿ ಕ್ಯುರೇಟರ್ ಕೃಷ್ಣಯ್ಯ, ಪ್ರಸ್ತುತ ಕ್ಯುರೇಟರ್ ಜಯಪ್ರಕಾಶ್, ಅವಿನಾಶ್ ಕಾಮತ್​, ಟ್ರಸ್ಟಿಗಳಾದ ಸಿರಾಜ್ ಅಹ್ಮದ್ ಮತ್ತು ಯೋಗೇಶ್ ಶೇಟ್​, ಉಮೇಶ್ ಆಚಾರ್ಯ ಉಪಸ್ಥಿತರಿದ್ದರು.

Ads on article

Advertise in articles 1

advertising articles 2

Advertise under the article