
ಬೆಂಗಳೂರು: ಡಾ.ಎಂ.ಜಿ. ಪ್ರಿಯಾಂಕ ಅವರಿಗೆ " ಜೀವಮಾನ ಸಾಧನೆ ಪ್ರಶಸ್ತಿ"
ಬೆಂಗಳೂರು: ಶ್ರೀಮತಿ ಎಸ್ ಆರ್ ಗೀತಾ ಮತ್ತು ಶ್ರೀ ಎಸ್ ಜೆ ಮಲ್ಲಿಕಾರ್ಜುನ್ ದಂಪತಿಯ ಸುಪುತ್ರಿಯಾದ ಡಾ.ಎಂ.ಜಿ.ಪ್ರಿಯಾಂಕ ಅವರು ಖ್ಯಾತ ಅಂಕಣಕಾರಾಗಿದ್ದು ಸಮಾಜದಲ್ಲಿ ಧನಾತ್ಮಕ ಚಿಂತನೆ ಮೂಲಕ ಯುವ ಪೀಳಿಗೆಯಲ್ಲಿ ಬದುಕಿನ ಭರವಸೆಯನ್ನು ಹೆಚ್ಚಿಸಿದ್ದಾರೆ. ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಅಪಾರ ಪಾಂಡಿತ್ಯ ಹೊಂದಿದ್ದು ಈ ಎರಡು ಭಾಷೆಗಳಲ್ಲಿ ಸುಮಾರು ಹತ್ತಕ್ಕಿಂತ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.ಉತ್ತಮ ಸಂಘಟಕರು ಮತ್ತು ಸಂಪನ್ಮೂಲ ವ್ಯಕ್ತಿಯಾಗಿ ರಾಜ್ಯ, ರಾಷ್ಟ್ರೀಯ, ಅಂತರರಾಷ್ಟ್ರೀಯ ಮಟ್ಟದಲ್ಲಿ ವಿದ್ವತ್ಪೂರ್ಣ ಉಪನ್ಯಾಸಗಳನ್ನು ನೀಡಿದ್ದಾರೆ. ತಮ್ಮ ಸಾಕ್ಷಿ ಪ್ರತಿಷ್ಠಾನದ ಮೂಲಕ ಕನ್ನಡ ಸಾಹಿತ್ಯದ ಕಾಯಕವನ್ನು ಬಹಳ ಶ್ರದ್ಧೆಯಿಂದ ಮಾಡಿಕೊಂಡು ಬಂದಿದ್ದಾರೆ. ಅಧ್ಯಯನ,ಅಧ್ಯಾಪನ ಮತ್ತು ಸಂಶೋಧನಾ ಕ್ಷೇತ್ರಗಳಲ್ಲಿ ಸದಾ ಸಕ್ರಿಯವಾಗಿರುವ ಇವರ ಸಾಹಿತ್ಯ ಸೇವೆಯನ್ನು ಕರ್ನಾಟಕ ಯೂತ್ ವೇಲ್ ಫೇರ್ ಅಸೋಸಿಯೇಷನ್ ಸಂಸ್ಥೆಯು ಪರಿಗಣಿಸಿ 2025 ನೇ ಸಾಲಿನ " ಜೀವಮಾನ ಸಾಧನೆ ಪ್ರಶಸ್ತಿ"ಯನ್ನು ದಿನಾಂಕ : 15.8.2025 ರಂದು ಬೆಂಗಳೂರಿನ ಜ್ಞಾನ ಸಿಂಧು ಸಭಾಂಗಣದಲ್ಲಿ ಪ್ರದಾನ ಮಾಡಲಾಗುತ್ತದೆ.