
ಉಡುಪಿ: ಡಾ.ಬನ್ನಂಜೆ ಗೋವಿಂದ ಪಂಡಿತಾಚಾರ್ಯರ ನವತಿ (90) ಜನ್ಮವರ್ಧಂತಿ ಉತ್ಸವ- ಕಾರ್ಯಕ್ರಮಗಳ ಉದ್ಘಾಟನೋತ್ಸವ , ಬನ್ನಂಜೆ ಕೃತಿ , ಗಾಯನ ಸಿಡಿ ಬಿಡುಗಡೆ
ಉಡುಪಿ: ಶ್ರೀ ಕೃಷ್ಣಮಠದ ರಾಜಾಂಗಣದಲ್ಲಿ ಶನಿವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ವಿದ್ಯಾವಾಚಸ್ಪತಿ ಡಾ ಬನ್ನಂಜೆ ಗೋವಿಂದ ಪಂಡಿತಾಚಾರ್ಯರ ನವತಿ ಜನ್ಮವರ್ಧಂತಿ ಕಾರ್ಯಕ್ರಮಗಳ ಉದ್ಘಾಟನೋತ್ಸವ ನಡೆಯಿತು . ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ದೀಪಜ್ವಲನಗೈದು ಬನ್ನಂಜೆಯವರ ಕೃತಿಗಳಿಗೆ ಆರತಿ ಬೆಳಗಿ ಉದ್ಘಾಟಿಸಿ ಸಂದೇಶ ನೀಡಿ ವರ್ಷಪೂರ್ತಿ ಜನ್ಮವರ್ಧಂತಿ ಸಮಿತಿ ಮತ್ತು ಈಶಾವಾಸ್ಯ ಪ್ರತಿಷ್ಠಾನಗಳು ಹಮ್ಮಿಕೊಂಡ ಕಾರ್ಯಕ್ರಮಗಳು ಯಶಸ್ವಿಯಾಗಬೇಕು. ಬನ್ನಂಜೆಯವರ ವಾಙ್ಮಯ ಕೃತಿಗಳನ್ನು ಕಾಲಕಾಲಕ್ಕೆ ಪ್ರಕಾಶಿಸಿ ಮುಂದಿನ ಪೀಳಿಗೆಗೆ ಆ ಕೃತಿಗಳ ಮೂಲಕ ಬನ್ನಂಜೆಯವರ ವಿಚಾರದಧಾರೆಗಳನ್ನು ಉಳಿಸುವ ಕೆಲಸಕ್ಕಿಂತ ಮಿಗಿಲಾದುದಿಲ್ಲ.ಬನ್ನಂಜೆಯವರು ಪ್ರತಿಯೊಂದನ್ನೂ ವಿಮರ್ಶಿಸುತ್ತಿದ್ದರು.ಇದನ್ನೇ ಗೀತೆಯಲ್ಲೂ ಕೃಷ್ಣ ಹೇಳಿದ್ದು. ಆದ್ದರಿಂದ ಪ್ರತಿಯೊಬ್ಬರೂ ಜೀವನದಲ್ಲಿ ವಿಮರ್ಶಾದೃಷ್ಟಿ ಇಟ್ಟುಕೊಂಡರೆ ಪ್ರತಿಯೊಬ್ಬರೂ ಬನ್ನಂಜೆಯಾಗ್ತಾರೆ.ಅದೂ ಅವರಿಗೆ ಸಲ್ಲಿಸುವ ಗೌರವ ಆಗ್ತದೆ ಎಂದರು.
ಶ್ರೀ ಸುಶ್ರೀಂದ್ರ ತೀರ್ಥರು ಸಂದೇಶ ನೀಡಿದರು.
ಶತಾವಧಾನಿ ಡಾ.ರಾಮನಾಥಾಚಾರ್ಯರು ಪ್ರಧಾನ ಉಪನ್ಯಾಸಗೈದು ಬನ್ನಂಜೆಯವರ ಸಾಹಿತ್ಯ ,ತತ್ವಶಾಸ್ತ್ರ , ಭಾಷಾ ಸಂಶೋಧನೆಗಳ ಅಗಾಧತೆಯನ್ನು ವಿವರವಾಗಿ ವಿಶ್ಲೇಶಿಸಿದರು.ಸಂಸದ ಕೋಟ ಶ್ರೀನಿವಾಸ ಪೂಜಾರಿ ಶುಭಾಶಂಸನೆಗೈದರು.ಸಮಿತಿ ಅಧ್ಯಕ್ಷ ಮಾಜಿ ಶಾಸಕ ಕೆ. ರಘುಪತಿ ಭಟ್ ಅಧ್ಯಕ್ಷತೆ ವಹಿಸಿದ್ದರು.ನಿವೃತ್ತ ಮುಖ್ಯ ನ್ಯಾಯಮೂರ್ತಿ ದಿನೇಶ್ ಕುಮಾರ್ ,
ಮಂಗಳೂರು ಶ್ರೀನಿವಾಸ ಸಮೂಹ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಡಾ ಎ ರಾಘವೇಂದ್ರರಾವ್ , ಶಾರದಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಪ್ರೊ. ಎಂ ಬಿ ಪುರಾಣಿಕ್ ,ಶಾಸಕ ಯಶ್ಪಾಲ್ ಎ ಸುವರ್ಣ , ಇಂಜಿನಿಯರ್ ಕೆ ರಮೇಶ್ ರಾವ್ ಬೀಡು ,ಶ್ರೀ ಕ್ಷೇತ್ರಬಲಪಾಡಿಯ ಧರ್ಮದರ್ಶಿ ಡಾ ನಿ ಬೀ ವಿಜಯ ಬಲ್ಲಾಳ್ ,ವಿದ್ವಾನ್ ಪಾವಂಜೆ ವಾಸುದೇವ ಭಟ್ , ಪುತ್ತಿಗೆ ಮಠದ ಅಂತಾರಾಷ್ಟ್ರೀಯ ಕಾರ್ಯದರ್ಶಿ ಎಂ ಪ್ರಸನ್ನಾಚಾರ್ಯ , ಡಾ ಬನ್ನಂಜೆಯವರ ಸುಪುತ್ರ ವಿನಯಭೂಷಣ ಆಚಾರ್ಯ ಉಪಸ್ಥಿತರಿದ್ದರು.
ಅಮೇರಿಕಾದ ದೀಪಕ್ ಕಟ್ಟೆಯವರು ಪ್ರಕಾಶಿಸಿದ ಬನ್ನಂಜೆಯವರ ಕವನಗಳ ಗಾಯನದ ಸಿಡಿ ಬಿಡುಗಡೆ ಗೊಂಡಿತು. ಸಮಿತಿ ಪ್ರಧಾನ ಕಾರ್ಯದರ್ಶಿ ವಾಸುದೇವ ಭಟ್ ಪೆರಂಪಳ್ಳಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ವಾರಿಜಾಕ್ಷಿ ಆರ್ ಭಟ್ ಬನ್ನಂಜೆಯವರ ಗೀತೆಯ ಗಾಯನಗೈದರು.ಸಮಿತಿ ಕೋಶಾಧಿಕಾರಿ ಪ್ರಸಾದ್ ಉಪಾಧ್ಯಾಯ ,ಈಶಾವಾಸ್ಯ ಪ್ರತಿಷ್ಠಾನದ ವಿಶ್ವಸ್ತರಾದ ಬಾಲಾಜಿ ರಾಘವೇಂದ್ರಾಚಾರ್ಯರು ಪ್ರಸ್ತಾವನೆಗೈದರು.
ಸದಸ್ಯರಾದ ಅಭಿರಾಮ ತಂತ್ರಿ ಸತೀಶ್ ಕುಮಾರ್ , ರಾಹುಲ್ ,ಪರಶುರಾಮ ಭಟ್ ವಿಘ್ನೇಶ್ , ಯಾಸ್ಕ ಆಚಾರ್ಯ , ಪ್ರಶಾಂತ್ ಶೆಟ್ಟಿ , ಶ್ರೀಮಠದ ರಮೇಶ ಭಟ್ , ಮಹಿತೋಶ್ ಆಚಾರ್ಯ ಸಹಕರಿಸಿದರು.
ಅನೇಕ ಮಠಾಧೀಶರು ಹಾಗೂ ಗಣ್ಯರ ವಿಡಿಯೋ ಮತ್ತು ಪೋಸ್ಟರ್ ಸಂದೇಶಗಳನ್ನು ಎಲ್ ಇ ಡಿ ಪರದೆಯಲ್ಲಿ ಬಿತ್ತರಿಸಲಾಯಿತು.
ಸಭೆಯ ಬಳಿಕ ಮೈಸೂರಿನ ಕಲಾ ಸಂದೇಶ ಪ್ರತಿಷ್ಠಾನದ ನೃತ್ಯ ವಿದ್ವಾನ್ ಸಂದೇಶ ಭಾರ್ಗವ್ ಮತ್ತು ತಂಡದವರಿಂದ ವಿಶ್ವಾಮಿತ್ರ ಗಾಯತ್ರಿ ನೃತ್ಯರೂಪಕ ಸುಂದರವಾಗಿ ಮೂಡಿಬಂದಿತು.