ಉಡುಪಿ ಸಿಟಿ ಸೆಂಟರ್ ಮಾಲ್‌ನಲ್ಲಿ ಸಂಭ್ರಮದ ಸ್ವಾತಂತ್ರೊತ್ಸವ ದಿನಾಚರಣೆ

ಉಡುಪಿ ಸಿಟಿ ಸೆಂಟರ್ ಮಾಲ್‌ನಲ್ಲಿ ಸಂಭ್ರಮದ ಸ್ವಾತಂತ್ರೊತ್ಸವ ದಿನಾಚರಣೆ

 


ಉಡುಪಿ, ಆ.15 : ಉಡುಪಿಯ ಸಿಟಿ ಸೆಂಟರ್ ಮಾಲ್‌ನಲ್ಲಿ ೭೯ನೇ ಸ್ವಾತಂತ್ರೋತ್ಸವವನ್ನು ಶುಕ್ರವಾರ ವಿಶಿಷ್ಟ ಹಾಗೂ ಸಂಭ್ರಮದಿಂದ ಆಚರಿಸಲಾಯಿತು.

ಸಿಟಿ ಸೆಂಟರ್ ಮಾಲ್ ಬಿಲ್ಡಿಂಗ್‌ನಲ್ಲಿ ನಡೆದ ಸ್ವಾತಂತ್ರೊತ್ಸವದ ಧ್ವಜಾರೋಹಣವನ್ನು ಭಾರತ್ ಸ್ಕೌಟ್ ಮತ್ತು ಗೈಡ್ಸ್ ನ ಮುಖ್ಯ ಆಯುಕ್ತ ಜಯಕರ ಶೆಟ್ಟಿ ಇಂದ್ರಾಳಿ, ಉದ್ಯಮಿ  ಪುರುಷೋತ್ತಮ ಶೆಟ್ಟಿ ನೇರವೇರಿಸಿದರು.ಮುಖ್ಯ ಅತಿಥಿಗಳಾಗಿ ಮಂಗಳೂರು ಮಾಶ್ ಅಲ್ ಪ್ರೊಪರ್ಟಿಸ್ ನ ಹನೀಫ್,ಕುಂದಾಪುರ ಡಿಕೆ ಗ್ರೂಪ್ ಆಫ್ ಕಂಪನಿಯ ಆಡಳಿತ ನಿರ್ದೇಶಕ ನಿಶ್ಚಿತ್ ದಾಮೋದರ್, ಉಡುಪಿ ಜಾಮಿಯಾ ಮಸೀದಿಯ ಅಧ್ಯಕ್ಷ ರಿಯಾಜ್, ಮಂಗಳೂರು ಕುಝಿ ಮಂದಿ ರೆಸ್ಟೋರೆಂಟ್ ನ ಮಾಲಕ ಅಬ್ದುಲ್ ರೆಹಮಾನ್ ಬಾವ, ಕತಾರ್ ನ ಉದ್ಯಮಿ ಅಶ್ಪಾಕ್, ಮಂಗಳೂರಿನ ಉದ್ಯಮಿ ನಜೀರ್ ಅಹ್ಮದ್ ಬಾವ, ಉಡುಪಿ ಡೆವೆಲಪರ್ಸ್ ಆಡಳಿತ ನಿರ್ದೇಶಕ ಜಮಾಲುದ್ದೀನ್ ಅಬ್ಬಾಸ್, ಉಡುಪಿ ಡೆವಲಪರ್ಸ್ ನ ಬಿಸಿನೆಸ್ ಕನ್ಸಲ್ಟೆಂಟ್ ಹನೀಫ್, ಬಿಸಿನೆಸ್ ಡೆವಲಪ್‌ಮೆಂಟ್ ಡೈರೆಕ್ಟರ್ ಶ್ರೀನಿವಾಸನ್ ಉಪಸ್ಥಿತರಿದ್ದರು.



ಮಾಶ್ ಅಲ್ ಪ್ರೊಪರ್ಟಿ, ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್ ಹಾಗೂ ಸಾನಿಯಾ ಮೊಬೈಲ್ ಪ್ರಾಯೋಜಕತ್ವದಲ್ಲಿ ದೇಶಭಕ್ತಿಗೀತೆ, ಸಾಂಸ್ಕೃತಿಕ ಹಾಗೂ ವಿವಿಧ ಮನೋರಂಜನಾ ಕಾರ್ಯಕ್ರಮಗಳು ಜರಗಿದವು. 



ಚಿತ್ರಕಲಾ ಸ್ಪರ್ಧೆ, ಮಕ್ಕಳಿಗಾಗಿ ಕಿಡ್ಸ್ ಫ್ಯಾಶನ್ ಶೋ, ರಸಪ್ರಶ್ನೆ ಸ್ಪರ್ಧೆ(ಕ್ವಿಝ್)ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧಿಗಳು ಭಾಗವಹಿಸಿದ್ದರು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. 



ಉಡುಪಿ ಸಾನಿಯಾ ಮೊಬೈಲ್‌ನ ಇಮ್ರಾನ್, ಮಾಶ್ ಅಲ್ ಪ್ರೊಪರ್ಟಿಸ್ ನ ಹನೀಫ್, ಉದ್ಯಮಿಗಳಾದ ಅಬ್ದುಲ್ ರೆಹಮಾನ್ ಬಾವ, ಮುಸ್ತಫಾ, ನಝೀರ್ ಅಹ್ಮದ್ ಬಾವ ಮುಖ್ಯ ಅತಿಥಿಗಳಾಗಿದ್ದರು.  



ಸಿಟಿ ಸೆಂಟರ್ ಮಾಲ್‌ನ ಮ್ಯಾನೇಜರ್ ಪ್ರದೀಪ್ ಮೂಲ್ಯ, ಈವೆಂಟ್ ಮ್ಯಾನೇಜರ್ ಸೈಯದ್ ಅನೀಝ್ ಉಪಸ್ಥಿತರಿದ್ದರು. ಹಿಸ್ರಾರ್ ತಲ್ಲಾನಿ ಕಾರ್ಯಕ್ರಮ ನಿರೂಪಿಸಿದರು.

Ads on article

Advertise in articles 1

advertising articles 2

Advertise under the article