ಚಿಕ್ಕಮಗಳೂರು: ಜೈನ ಸಮುದಾಯದ ಹೆಣ್ಣು ಮಕ್ಕಳ ಬಗ್ಗೆ ಅಶ್ಲೀಲ ಕಮೆಂಟ್- ಯುವಕ ಬಂಧನ

ಚಿಕ್ಕಮಗಳೂರು: ಜೈನ ಸಮುದಾಯದ ಹೆಣ್ಣು ಮಕ್ಕಳ ಬಗ್ಗೆ ಅಶ್ಲೀಲ ಕಮೆಂಟ್- ಯುವಕ ಬಂಧನ

 


ಚಿಕ್ಕಮಗಳೂರು: ಯಾರದ್ದೋ ಪೋಸ್ಟ್‌ಗೆ ಅಶ್ಮೀಲವಾಗಿ ಕಮೆಂಟ್ ಮಾಡಿ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕಿನ ಯುವಕ ಉಮೇಶ್ ಗೌಡ ಪೊಲೀಸರ ಅತಿಥಿಯಾಗಿದ್ದಾನೆ. ಪ್ರಮುಖವಾಗಿ ಜೈನ ಸಮುದಾಯದ ಹೆಣ್ಣು ಮಕ್ಕಳ ಬಗ್ಗೆ ಅಶ್ಲೀಲ ಕಮೆಂಟ್ ಮಾಡಿದ ಉಮೇಶ್ ಗೌಡ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್ ಪೋಸ್ಟ್ ಮಾಡಲಾಗಿತ್ತು. ಈ ಪೋಸ್ಟ್‌ಗೆ ಉಮೇಶ್ ಗೌಡ ಕಮೆಂಟ್ ಮಾಡಿದ್ದಾನೆ. ಜೈನ ಸಮುದಾಯದ ಹೆಣ್ಣು ಮಕ್ಕಳನ್ನು ಅವಹೇಳನ ಮಾಡಿದ್ದಾನೆ. ಅತ್ಯಂತ ಕೆಟ್ಟ ಕಮೆಂಟ್ ಮಾಡಿ ವಿಕೃತಿ ಮೆರೆದಿದ್ದಾನೆ. ಆಗಸ್ಟ್ 2 ರಂದು ಉಮೇಶ್ ಗೌಡ ಅಶ್ಲೀಲ ಕಮೆಂಟ್ ಮಾಡಿದ್ದ. ಜೈನ ಸಮುದಾಯದ ಹೆಣ್ಣು ಮಕ್ಕಳ ಬಗ್ಗೆ ಅವಹೇಳನಕಾರಿ ಕಮೆಂಟ್‌ಗೆ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಕೇವಲ ಜೈನ ಸಮುದಾಯ ಮಾತ್ರವಲ್ಲ, ಹಲವರು ಈ ಕಮೆಂಟ್‌ಗೆ ಆಕ್ಷೇಪ ವ್ಯಕ್ತಪಡಿಸಿದ್ದರು.

ಕಮೆಂಟ್ ಕುರಿತು ಭಾರಿ ವಿರೋಧ ವ್ಯಕ್ತವಾಗುತ್ತಿದ್ದಂತೆ ಪೊಲೀಸರು ಬಿ.ಎನ್.ಎಸ್. ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಬಿ.ಎನ್.ಎಸ್. ಕಾಯ್ದೆಯ 196 (1) ಹಾಗೂ 353 (2) ಅಡಿ ಪ್ರಕರಣ ದಾಖಲಿಸಿದ್ದಾರೆ. ಬಳಿಕ ಉಮೇಶ್ ಗೌಡನಿಗಾಗಿ ಹುಡುಕಾಡಿದ ಪೊಲೀಸರು ಇದೀಗ ಅರೆಸ್ಟ್ ಮಾಡಿದ್ದಾರೆ.

ಸಾಮಾನ್ಯವಾಗಿ ಅವಹೇಳನ ಪೋಸ್ಟ್, ಅಥವಾ ಅಕ್ಷೇಪಾರ್ಹ ಪೋಸ್ಟ್, ವಿಡಿಯೋ ಹಾಕಿ ಅರೆಸ್ಟ್ ಆದ ಘಟನೆಗಳಿವೆ. ಆದರೆ ಇಲ್ಲಿ ಅವಹೇಳನ ಕಮೆಂಟ್ ಮಾಡಿ ಅರೆಸ್ಟ್ ಆಗಿದ್ದಾನೆ. ಯಾರದ್ದೋ ಪೋಸ್ಟ್‌ಗೆ ಕಮೆಂಟ್ ಮಾಡಿ ಅರೆಸ್ಚ್ ಆದ ರಾಜ್ಯದ ಮೊದಲ ಪ್ರಕರಣವಾಗಿದೆ.

Ads on article

Advertise in articles 1

advertising articles 2

Advertise under the article