
ಮಣಿಪಾಲ:ಹಿರಿಯ ಪತ್ರಕರ್ತ ದಿ. ಬಿ.ಟಿ. ರಂಜನ್ ಅವರ ಪುತ್ರಿ ಅನಾರೋಗ್ಯದಿಂದ ನಿಧನ
16/08/2025 04:49 AM
ಮಣಿಪಾಲ: ಹಿರಿಯ ಪತ್ರಕರ್ತ ದಿ. ಬಿ.ಟಿ. ರಂಜನ್ ಅವರ ಪುತ್ರಿ ಬಿ.ಟಿ.ಸೌಮ್ಯ (29) ಅವರು ಅಸೌಖ್ಯದಿಂದ ಶನಿವಾರ ಮೃತಪಟ್ಟಿದ್ದಾರೆ. ಮೂಲತಃ ಉಪ್ಪಿನಂಗಡಿ ನಿವಾಸಿಯಾದ ಇವರು, ಪತಿ ವೈಭವ್ ಅವರೊಂದಿಗೆ ಮಣಿಪಾಲದಲ್ಲಿ ವಾಸವಾಗಿದ್ದರು.
ಖಾಸಗಿ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದ ಸೌಮ್ಯ, ಪತ್ರಿಕೋದ್ಯಮದಲ್ಲಿ ಪದವೀಧರೆಯಾಗಿದ್ದರು. ಕಳೆದ ಕೆಲ ವು ದಿನಗಳಿಂದ ಅಸೌಖ್ಯದಿಂದ ಬಳಲುತ್ತಿದ್ದು ಆಸ್ಪತ್ರೆಗೆ ದಾಖಲಾಗಿದ್ದರು.ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾರೆ.