ಧರ್ಮಸ್ಥಳಕ್ಕೆ ಭಾನುವಾರ ಬಿಜೆಪಿ ತಂಡ ಭೇಟಿ - ನಾಳೆ 500 ಕಾರುಗಳಲ್ಲಿ ಬಿಜೆಪಿ ಕಾರ್ಯಕರ್ತರು ಧರ್ಮಸ್ಥಳಕ್ಕೆ

ಧರ್ಮಸ್ಥಳಕ್ಕೆ ಭಾನುವಾರ ಬಿಜೆಪಿ ತಂಡ ಭೇಟಿ - ನಾಳೆ 500 ಕಾರುಗಳಲ್ಲಿ ಬಿಜೆಪಿ ಕಾರ್ಯಕರ್ತರು ಧರ್ಮಸ್ಥಳಕ್ಕೆ

 

ಬೆಂಗಳೂರು: ಬಿಜೆಪಿಯ ಹಿರಿಯ ಶಾಸಕರು, ವಿಧಾನ ಪರಿಷತ್ ಸದಸ್ಯರನ್ನೊಳಗೊಂಡ ಒಂದು ತಂಡ ಭಾನುವಾರದಂದು ಧರ್ಮಸ್ಥಳಕ್ಕೆ ಭೇಟಿ ನೀಡಿ ಮಂಜನಾಥ ಸ್ವಾಮಿ ಮತ್ತು ಅಣ್ಣಪ್ಪ ಸ್ವಾಮಿಯ ದರ್ಶನ ಪಡೆಯಲಿದೆ ಎಂದು ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿದ್ದಾರೆ. ನಾವು ಪಕ್ಷದ ಪ್ರತಿನಿಧಿಗಳಾಗಿ ಅಲ್ಲಿಗೆ ಹೋಗೋದಿಲ್ಲ, ಜನಸಾಮಾನ್ಯರಂತೆ ಹೋಗುತ್ತೇವೆ, ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ನಮ್ಮ ನಿಲ್ಲುವು ಸ್ಪಷ್ಟವಾಗಿದೆ, ಸರ್ಕಾರ ರಚಿಸಿರುವ ಎಸ್​ಐಟಿ ಆದಷ್ಟು ಬೇಗ ತನ್ನ ತನಿಖೆಯನ್ನು ಪೂರ್ತಿಗೊಳಿಸಬೇಕು, ಅದು ತನಿಖೆಯನ್ನು ವಿನಾಕಾರಣ ವಿಳಂಬಗೊಳಿಸುವಂತಿಲ್ಲ ಎಂದು ಹೇಳಿದರು.

ಇನ್ನೊಂದೆಡೆ ಶಾಸಕ ಎಸ್.ಆರ್ ವಿಶ್ವನಾಥ್ ನೇತೃತ್ವದಲ್ಲಿ ಆ.16ರಂದು ಧರ್ಮಸ್ಥಳಕ್ಕೆ ಸುಮಾರು 500 ಕಾರುಗಳಲ್ಲಿ ಬಿಜೆಪಿ ಕಾರ್ಯಕರ್ತರು ಹೊರಡಲು ಸಿದ್ಧತೆ ನಡೆಸಿದ್ದಾರೆ.

ಯಲಹಂಕದಿಂದ ಶನಿವಾರ (ಆ.16) ಮುಂಜಾನೆ ಕಾರ್ಯಕರ್ತರು ಹೊರಡಲಿದ್ದಾರೆ. ನೂರಾರು ಜನ ಭಗವಾಧ್ವಜ ಹಿಡಿದು ಕೇಸರಿ ಶಾಲು ಧರಿಸಿ, ಧರ್ಮಸ್ಥಳಕ್ಕೆ ಹೊರಡಲಿದ್ದಾರೆ. ಪ್ರಯಾಣಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ. ಮಧ್ಯಾಹ್ನ ಸುಮಾರು 3 ಗಂಟೆಗೆ ವಿಶ್ವನಾಥ್ ತಂಡ ಧರ್ಮಸ್ಥಳ ತಲುಪಲಿದೆ. ದೇವರ ದರ್ಶನ ಪಡೆದು ಧರ್ಮಸ್ಥಳದಲ್ಲೇ ಶನಿವಾರ ರಾತ್ರಿ ವಾಸ್ತವ್ಯ ಹೂಡಲಿದ್ದಾರೆ.

Ads on article

Advertise in articles 1

advertising articles 2

Advertise under the article