
ಶಿರ್ವದ ಫೈಝಲ್ ಇಸ್ಲಾಂ ಪಬ್ಲಿಕ್ ಸ್ಕೂಲ್ ನಲ್ಲಿ 79ನೇ ಸ್ವಾತಂತ್ರ್ಯೋತ್ಸವ
ಶಿರ್ವ: ಇಲ್ಲಿನ ಫೈಝಲ್ ಇಸ್ಲಾಂ ಪಬ್ಲಿಕ್ ಸ್ಕೂಲ್ ನಲ್ಲಿ 79ನೇ ಸ್ವಾತಂತ್ರ್ಯೋತ್ಸವವನ್ನು ಭಕ್ತಿ ಮತ್ತು ಸಂಭ್ರಮದಿಂದ ಆಚರಿಸಲಾಯಿತು.ಸ್ವಾತಂತ್ರ್ಯದಿನದ ಧ್ವಜಾರೋಹಣವನ್ನು ಲಯನ್ ಡಾ.ಶೇಖ್ ವಾಹಿದ್ ದಾವೂದ್ ,ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇವರು ನೆರವೇರಿಸಿದರು.ಧ್ವಜಾರೋಹಣ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಡಾ.ಶೇಖ್ ವಾಹಿದ್ ದಾವೂದ್ ಅವರು ಸ್ವಾತಂತ್ರ್ಯ ದಿನದ ಸಂದೇಶ ನೀಡುತ್ತಾ ಸೈನಿಕರ ತ್ಯಾಗ ಬಲಿದಾನಗಳನ್ಬು ಸ್ಮರಿಸಿದರು.
ಜನಾಬ್ ಪರ್ವೇಜ್ ಸಾಹೇಬ್ ,ಜನಾಬ್ ಜುಬೈರ್ ಸಾಹೇಬ್ ,ಜನಾಬ್ ಆಬಿದ್ ಸಾಹೇಬ್ ,ಆಸಿಫ್ ಸಾಹೇಬ್ ,ಹರ್ಶದ್ ಹಾಶ್ಮಿ ,ಜೆಫ್ರು ಸಾಹೆಬ್ ,ಸುಲೈಮಾನ್ ಸಾಹೇಬ್ ,ಶೇಖ್ ಹರ್ಷದ್ ಅಬ್ಬಾಸ್ ಸಾಹೇಬ್ ಮತ್ತಿತರ ಗಣ್ಯರ ಸಮಕ್ಷಮ ಸ್ವಾತಂತ್ರ್ಯ ದಿನ ಸಂಪನ್ನಗೊಂಡಿತು. ಅಧಕ್ಷ ಮೊಹಮ್ಮದ್ ಖಾಲಿದ್ ,ಉಪಾಧ್ಯಕ್ಷರಾದ ಉಮರ್ ಇಸ್ಮಾಯಿಲ್ ,ಹಸನಬ್ಬ ,ಕರೆಸ್ಪಾಂಡೆಂಟ್ ಮಹಮ್ಮದ್ ಯೂನುಸ್ ,ಕೋಶಾಧಿಕಾರಿ ಪರ್ವೇಜ್ ಸಲೀಮ್ ಮತ್ತಿತರರು ಈ ಸಂದರ್ಭ ಉಪಸ್ಥಿತರಿದ್ದರು.
ಶಾಲೆಯ ವಿದ್ಯಾರ್ಥಿಗಳು ,ಅಧ್ಯಾಪಕ ವೃಂದ ಮತ್ತು ಆಡಳಿತ ಮಂಡಳಿ ಸದಸ್ಯರು ಕಾರ್ಯಕ್ರಮದಲ್ಲಿ ಭಾಗಿಯಾದರು.