
ಧರ್ಮಸ್ಥಳ: ತಲೆಬುರುಡೆ ಪ್ರಕರಣ- ವೀರೇಂದ್ರ ಹೆಗ್ಗಡೆ ಮೊದಲ ಪ್ರತಿಕ್ರಿಯೆ
ಧರ್ಮಸ್ಥಳ: ಇಡೀ ದೇಶದಲ್ಲಿ ಸಂಚಲನ ಮೂಡಿಸಿರುವ ಧರ್ಮಸ್ಥಳ ತಲೆ ಬುರುಡೆ ಪ್ರಕರಣಕ್ಕೆ ಸಂಬಂಧಪಟ್ಟು ಇದೇ ಮೊದಲ ಬಾರಿಗೆ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಪ್ರತಿಕ್ರಿಯೆ ನೀಡಿದ್ದಾರೆ
ಈ ಆರೋಪಗಳೆಲ್ಲಾ ಸುಳ್ಳು, ಹುಟ್ಟು ಹಾಕಿರುವವು .ನನಗೆ ಇದರಿಂದ ತುಂಬಾ ನೋವು ಉಂಟಾಗಿದೆ. ಯಾರಿಗೂ ನನ್ನ ಮೇಲೆ, ಕ್ಷೇತ್ರದ ಮೇಲೆ ಯಾವ ಅನುಮಾನಗಳಿಲ್ಲ. ಭಕ್ತರು ಕೂಡ ಇದನ್ನೆಲ್ಲಾ ನೋಡಿ ನೋವು ಅನುಭವಿಸಿದ್ದಾರೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಪಿಟಿಐ ಜೊತೆ ಮಾತನಾಡುತ್ತಾ ಹೇಳಿದ್ದಾರೆ.
ನನಗೆ ಮೂವರು ಸೋದರರು, ಓರ್ವ ಸೋದರಿ ಇದ್ದಾರೆ. ನನ್ನ 2ನೇ ಸೋದರ ಬೆಂಗಳೂರಿನಲ್ಲಿದ್ದು, ಶಿಕ್ಷಣ ಸಂಸ್ಥೆ ನೋಡಿಕೊಳ್ತಾರೆ. ಮೂರನೇ ಸೋದರ ಇಲ್ಲೇ ಧರ್ಮಸ್ಥಳದಲ್ಲೇ ಇದ್ದು, ಆಡಳಿತಾತ್ಮಕ ವಿಷಯ ನೋಡಿಕೊಳ್ತಾರೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ. ಇದೊಂದು ವ್ಯವಸ್ಥಿತ ಷಡ್ಯಂತ್ರ. ಇದೆಲ್ಲ ಅನಾವಶ್ಯಕ ವಾಗಿ ಮಾಡಿದ ಪ್ರಯತ್ನ. ಕ್ಷೇತ್ರ, ಕ್ಷೇತ್ರದ ಇತಿಹಾಸ, ಗೌರವ ಹಾಗೇ ಇದೆ. ಕ್ಷೇತ್ರದ ಬಗ್ಗೆ ಹಿಂದಿನಿಂದಲೂ ಷಡ್ಯಂತ್ರ ಮಾಡಿದ್ದಾರೆ ಅಂತ ಹೇಳಿದ್ದಾರೆ. ಎಸ್ಐಟಿ ತನಿಖೆಯನ್ನು ಸ್ವಾಗತಿಸಿದ ಅವರು, ಇದು ಒಳ್ಳೆಯ ಕೆಲಸ. ಸತ್ಯ ಹೊರಗೆ ಬರಲಿ ಅಂತ ಆಗ್ರಹಿಸಿದ್ದಾರೆ.ನಾನು ಧರ್ಮಸ್ಥಳದಲ್ಲಿ ಇಲ್ಲದೇ ಇದ್ದ ಸಂದರ್ಭದಲ್ಲಿ ನನ್ನ ಸೋದರ ಇಲ್ಲಿನ ಉಸ್ತುವಾರಿಯನ್ನೂ ವಹಿಸಿಕೊಳ್ತಾರೆ. ಪ್ರಮುಖವಾಗಿ ಅನ್ನ ಸಂತರ್ಪಣೆಯ ಬಗ್ಗೆ, ಸ್ವಚ್ಛತೆ, ಯಕ್ಷಗಾನ ಹೊಣೆಯನ್ನು ನಿಭಾಯಿಸುತ್ತಾರೆ. ಅವರ ಮೇಲೆ ಸಾಕಷ್ಟು ಜವಾಬ್ದಾರಿಗಳಿದ್ದು, ಎಲ್ಲಾ ನಿಭಾಯಿಸುತ್ತಾರೆ.
ಇನ್ನಿಬ್ಬರು, ಸ್ವತಂತ್ರವಾಗಿದ್ದಾರೆ. ನನ್ನ ಸೋದರಿ ಧಾರವಾಡದಲ್ಲಿದ್ದಾರೆ. ನನ್ನ ಬಾವ, ಧಾರವಾಡ ಮೆಡಿಕಲ್ ಕಾಲೇಜ್ ವಿವಿಯ ವೈಸ್ ಚಾನ್ಸಲರ್ ಆಗಿದ್ದಾರೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಹೇಳಿದ್ದಾರೆ.
ನಾವು ಆರಂಭದಲ್ಲೇ ಎಸ್ಐಟಿಯನ್ನ ಸ್ವಾಗತ ಮಾಡಿದ್ದೇವೆ. ಈ ಜನರು ಸಾಕಷ್ಟು ಅನುಮಾನಗಳನ್ನು ಹುಟ್ಟುಹಾಕಿದ್ದಾರೆ . ಅನುಮಾನ, ಗೊಂದಲಗಳನ್ನ ಭಕ್ತರಲ್ಲಿ ಹುಟ್ಟುಹಾಕಿದ್ದಾರೆ. ಸೂಕ್ತ ತನಿಖೆಯಿಂದ ಇದೆಲ್ಲವೂ ಬಗೆಹರಿದರೆ ಒಳ್ಳೆಯದು ಅಂತ ನಾನು ಭಾವಿಸಿದ್ದೇನೆ. ಸರ್ಕಾರ ತನಿಖಾ ತಂಡ ರಚಿಸಿ, ಇದಕ್ಕೆ ಪರಿಹಾರ ಕಂಡುಕೊಂಡ್ರೆ ಒಳ್ಳೆಯದೆಂಬ ಭಾವನೆ ಇತ್ತು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಇದೇ ಮೊದಲ ಭಾರಿಗೆ ಈ ಎಲ್ಲ ವಿವಾದಗಳ ಬಗ್ಗೆ ಬಹಿರಂಗವಾಗಿ ಮಾಧ್ಯಮದ ಮೂಲಕ ಪ್ರತಿಕ್ರಿಯೆಯನ್ನು ನೀಡಿದ್ದಾರೆ.