
ಉಡುಪಿ: ಆ.28 ರಂದು ಕುಮಾರಿ ಅದಿತಿ ಜಿ. ನಾಯಕ್ ಅವರಿಂದ ನೃತ್ಯಾರ್ಪಣ ಕಾರ್ಯಕ್ರಮ
ಉಡುಪಿ: ರಾಧಾಕೃಷ್ಣ ನೃತ್ಯ ನಿಕೇತನದ ಕುಮಾರಿ ಅದಿತಿ ಜಿ. ನಾಯಕ್ ಅವರ ನೃತ್ಯಾರ್ಪಣ ಕಾರ್ಯಕ್ರಮವು ಆ. 28 ರಂದು ಗುರುವಾರ ಐವೈಸಿ ಯಕ್ಷಗಾನ ಕಲಾರಂಗ ಸಭಾಂಗಣದಲ್ಲಿ ಸಂಜೆ 5:15 ಕ್ಕೆ ಆರಂಭವಾಗಲಿದೆ ಎಂದು ನೃತ್ಯಗುರು ವಿದುಷಿ ವೀಣಾ ಎಂ. ಸಾಮಗ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದರು.
ಅಂದಿನ ಕಾರ್ಯಕ್ರಮದ ಉದ್ಘಾಟಕರಾಗಿ ಪತ್ರಕರ್ತ ಹಾಗೂ ಸ್ಕೌಟ್ ಆಯುಕ್ತ ಜನಾರ್ದನ್ ಕೊಡವೂರು ಆಗಮಿಸಲಿರುವರು.
ಅತಿಥಿ ಅಭ್ಯಾಗತರಾಗಿ ಮಂಗಳೂರಿನ ಸೌರಭ ಕಲಾ ಪರಿಷತ್ ನ ಡಾ| ಶ್ರೀವಿದ್ಯಾ ಆಗಮಿಸಲಿದ್ದಾರೆ.ಅದಿತಿ ನಾಯಕ್ ಅಂದು ಭರತನಾಟ್ಯ ಹಾಗೂ ಕೂಚುಪುಡಿ ನೃತ್ಯ ಪ್ರದರ್ಶನ ನೀಡಲಿದ್ದಾರೆ. ಅಂದಿನ ನೃತ್ಯ ಕಾರ್ಯಕ್ರಮದ ನಟುವಾಂಗ, ನೃತ್ಯ ನಿರ್ದೇಶನ, ಹಾಡುಗಾರಿಕೆ ವಿದುಷಿ ಶ್ರೀಮತಿ ವೀಣಾ ಎಂ. ಸಾಮಗ, ಮೃದಂಗದಲ್ಲಿ ಮಂಗಳೂರಿನ ವಿದ್ವಾನ್ ಮನೋಹರ್ ರಾವ್, ವಯಲಿನ್ ನಲ್ಲಿ ವಿದ್ವಾನ್ ಶ್ರೀಧರ್ ಆಚಾರ್ಯ, ಹಾಗೂ ಕೊಳಲಿನಲ್ಲಿ ಡಾ| ಬಾಲಕೃಷ್ಣ ಮಣಿಪಾಲ ಸಹಕರಿಸಲಿರುವರು ಎಂದು ವಿದುಷಿ ಶ್ರೀಮತಿ ವೀಣಾ ಎಂ. ಸಾಮಗ ಹೇಳಿದರು. ಕುಮಾರಿ ಅದಿತಿ ಜಿ. ನಾಯಕ್ ಉಪಸ್ಥಿತರಿದ್ದರು.