ಮಣಿಪಾಲ: ಅಪಾಯಕಾರಿ,  ಅತೀ ವೇಗ ಹಾಗೂ ನಿರ್ಲಕ್ಷ್ಯತನದ ಕಾರು ಚಾಲನೆ- ಕಾರು ಸಮೇತ ಕೇರಳ ಯುವಕ ಅರೆಸ್ಟ್

ಮಣಿಪಾಲ: ಅಪಾಯಕಾರಿ, ಅತೀ ವೇಗ ಹಾಗೂ ನಿರ್ಲಕ್ಷ್ಯತನದ ಕಾರು ಚಾಲನೆ- ಕಾರು ಸಮೇತ ಕೇರಳ ಯುವಕ ಅರೆಸ್ಟ್

 


ಮಣಿಪಾಲ: ಅಪಾಯಕಾರಿಯಾಗಿ  ಅತೀ ವೇಗ ಹಾಗೂ ನಿರ್ಲಕ್ಷ್ಯತನದ ಕಾರು ಚಾಲನೆ ಮಾಡಿದ ಕೇರಳ ಮೂಲದ ಯುವಕನನ್ನು ಪೊಲೀಸರು ಮಣಿಪಾಲ ಎಂಐಟಿ ಬಳಿ ವಶಕ್ಕೆ ಪಡೆದಿದ್ದಾರೆ.

ಕೇರಳ ಮೂಲದ ಚಾಲಕ ಶೋಹೈಲ್‌ ನೀಲಾಕತ್‌(26) ಬಂಧಿತ ವ್ಯಕ್ತಿ.

ಕೇರಳ ಕಣ್ಣೂರು ಮೂಲದ ಈತನ ವಿರುದ್ಧ ಮಣಿಪಾಲ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ : 143/2025 ಕಲಂ: 2 81,125,292 BNS ಮತ್ತು IMV Rlue 51 R/W  177 and Rule 100(2) R/W 177 IMV Act ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಈತ ಉಡುಪಿ ಕಡೆಯಿಂದ ಹಿರಿಯಡ್ಕ ಕಡೆಗೆ 12ABH59440 ನಂಬರ್ ನ ಆಕಾಶ ನೀಲಿ ಬಣ್ಣದ ಕಾರನ್ನು ಸಂಪೂರ್ಣ ಟಿಂಟ್‌ ಅಳವಡಿಸಿಕೊಂಡು ಅಜಾಗರೂಕತೆಯಿಂದ ಅಪಾಯಕಾರಿಯಾಗಿ ಡ್ರೈವ್ ಮಾಡಿದ್ದ. ಮಾತ್ರವಲ್ಲ,  ದ್ವಿಚಕ್ರ ವಾಹನಗಳು ಹಾಗೂ ಇತರ ವಾಹನಗಳಿಗೆ  ಅಪಘಾತ ಉಂಟು ಮಾಡುವ ರೀತಿಯಲ್ಲಿ ಅಡ್ಡಾದಿಡ್ಡಿಯಾಗಿ ಚಲಾಯಿಸಿಕೊಂಡು ಹೋಗುತ್ತಿದ್ದ.  ಈ ವೇಳೆ ಮಣಿಪಾಲ ಪೊಲೀಸ್‌ ಠಾಣೆ   ಸಿಬ್ಬಂದಿ ಹಿಂಬಾಲಿಸಿ MIT ಜಂಕ್ಷನ್‌ ಬಳಿ ಕಾರನ್ನು ತಡೆದು ವಶಕ್ಕೆ ಪಡೆದುಕೊಂಡಿದ್ದಾರೆ.

Ads on article

Advertise in articles 1

advertising articles 2

Advertise under the article