
ಬೆಂಗಳೂರು: ಚಿನ್ನದ ವ್ಯಾಪಾರಿಯಿಂದ 10 ಲಕ್ಷ ರೂ. ಸುಲಿಗೆ ಆರೋಪ - ಪೊಲೀಸ್ ಇನ್ಸ್‌ಪೆಕ್ಟರ್‌ಗಳು ಸಸ್ಪೆಂಡ್
23/09/2025 04:04 AM
ಬೆಂಗಳೂರು: ಕರ್ತವ್ಯ ಲೋಪ ಎಸಗಿದ ಇಬ್ಬರು ಪೊಲೀಸ್ ಇನ್ಸ್‌ಪೆಕ್ಟರ್‌ಗಳನ್ನು ಅಮಾನತು ಮಾಡಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಆದೇಶ ಹೊರಡಿಸಿದ್ದಾರೆ.
ಕೋರಮಂಗಲ ಠಾಣೆಯ ಇನ್ಸ್‌ಪೆಕ್ಟರ್ ಲೋಯಿ ರಾಮರೆಡ್ಡಿ ಹಾಗೂ ಹಲಸೂರು ಗೇಟ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಹನುಮಂತಪ್ಪ ಭಜಂತ್ರಿ ಅಮಾನತುಗೊಂಡವರು. ಇದರೊಂದಿಗೆ ಒಬ್ಬ ಎಎಸ್‌ಐ, ಮೂವರು ಸಿಬ್ಬಂದಿ ಸೇರಿ ಹಲಸೂರು ಗೇಟ್ ಠಾಣೆಯ ನಾಲ್ವರು ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿ ಆದೇಶ ಹೊರಡಿಸಲಾಗಿದೆ. ಚಿನ್ನದ ಉದ್ಯಮಿ ಬಳಿ ಹತ್ತು ಲಕ್ಷ ರೂಪಾಯಿ ಸುಲಿಗೆ ಮಾಡಿದ ಆರೋಪ ಇವರ ಮೇಲೆ ಇತ್ತು. ಸಿಸಿಟಿವಿ ಸಹಿತ ದಾಖಲೆ ಸಮೇತ ಸಿಕ್ಕಿಬಿದ್ದ ಹಿನ್ನೆಲೆಯಲ್ಲಿ ಅಮಾನತು ಆದೇಶ ಹೊರಡಿಸಲಾಗಿದೆ.