
ಗಂಗೊಳ್ಳಿ: ಸಾಮಾಜಿಕ ಜಾಲತಾಣದಲ್ಲಿ ಪ್ರವಾದಿ ಪೈಗಂಬರ್ ವಿರುದ್ಧ ಅವಹೇಳನಕಾರಿ ಕಾಮೆಂಟ್- ಕ್ರಮಕ್ಕೆ ಆಗ್ರಹ
23/09/2025 05:43 AM
ಗಂಗೊಳ್ಳಿ: ಸಾಮಾಜಿಕ ಜಾಲತಾಣದಲ್ಲಿ ಪ್ರವಾದಿ ಪೈಗಂಬರ್ ವಿರುದ್ಧ ಅವಹೇಳನಕಾರಿ ಕಾಮೆಂಟ್ ಮಾಡಿದ ಆರೋಪಿ ವಿರುದ್ಧ ಸೂಕ್ತ ಕಾನೂನು ಕ್ರಮ ಜರಗಿಸುವಂತೆ ಆಗ್ರಹಿಸಿ ಗಂಗೊಳ್ಳಿ ಪೊಲೀಸ್ ಠಾಣೆಗೆ ಮನವಿ ಸಲ್ಲಿಸಲಾಗಿದೆ.
ಇತ್ತೀಚೆಗೆ ಪತ್ರಿಕೆಯೊಂದರ ವೆಬ್‌ಸೈಟ್‌ನಲ್ಲಿ ಬಂದ ಸುದ್ದಿಗೆ ಸಂಬಂಧಿಸಿ ಸನಾತನಿ ಸಿಂಹ ಎಂಬ ಪೇಜಿನಿಂದ ಪ್ರವಾದಿ ಪೈಗಂಬರ್ ವಿರುದ್ಧ ಅವಹೇಳನಕಾರಿಯಾಗಿ ಕಾಮೆಂಟ್ ಹಾಕಿದ್ದು, ಈ ಪೇಜ್‌ನ ವಿರುದ್ಧ ಪ್ರಕರಣ ದಾಖಲಿಸಿ ಕ್ರಮಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ಗಂಗೊಳ್ಳಿಯ ಅಬ್ದುಲ್ ಸಲಾಮ್, ಸಲಾವುದ್ದೀನ್, ಮುನೀರ್ ಮೇಸ್ತ್ರಿ ಆಶಿಮ್ ಕೋಟೆ, ಇಮ್ರಾನ್, ಫವಾಝ್, ಸಫ, ಝಿಯಾ ಮತ್ತಿತರು ಉಪಸ್ಥಿತರಿದ್ದರು.