ಕೋಟ: ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನವನ್ನು ಮೊಗವೀರರಿಗೆ ನೀಡಲು ಆಗ್ರಹ

 


ಕೋಟ: ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನವನ್ನು ಮೊಗವೀರ ಸಮುದಾಯಕ್ಕೆ ನೀಡಬೇಕು. ಕಾರ್ಯಕರ್ತರ ಜತೆ ನಿರಂತರ ಸಂಪರ್ಕವಿರುವ ಯುವ ನಾಯಕರಿಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಕಾಂಗ್ರೆಸ್ ಹಿಂದುಳಿದ ವರ್ಗಗಳ ಸಮಿತಿಯ ಜಿಲ್ಲಾ ಉಪಾಧ್ಯಕ್ಷ ಕೋಟ ನಾಗೇಂದ್ರ ಪುತ್ರನ್‌ಗೆ ಪ್ರಥಮ ಪ್ರಾಶಸ್ತ್ರ ನೀಡಬೇಕು ಎಂದು ಮೊಗವೀರ ಯುವ ಸಂಘಟನೆ ಸಾಲಿಗ್ರಾಮ ಘಟಕದ ಪ್ರಧಾನ ಕಾರ್ಯದರ್ಶಿ ಜಗನ್ನಾಥ್ ಅಮೀನ್ ಆಗ್ರಹಿಸಿದರು. ಸಾಲಿಗ್ರಾಮದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕರಾವಳಿ ಭಾಗದಲ್ಲಿ ಉದ್ದಗಲಕ್ಕೂ ಮೊಗವೀರ ಸಮಾಜ ಇರುವುದರಿಂದ ನಮ್ಮ ಯುವ ನಾಯಕರನ್ನ ಪರಿಗಣಿಸಬೇಕು ಎಂದರು. ಗೋಪಾಲ್ ಜಿ.ಕೋಟ, ಸತೀಶ್ ಆಚಾರ್ಯ ಹರ್ತಟ್ಟು, ಕಿಶೋರ್ ಶೆಟ್ಟಿ ಉಪಸ್ಥಿತರಿದ್ದರು.