ಕೊಡವೂರು: ಆಶಕ್ತರು ಮತ್ತು ಕ್ಯಾನ್ಸರ್ ಪೀಡಿತರಿಗೆ ಆಹಾರ ಕಿಟ್ ವಿತರಣೆ

ಕೊಡವೂರು: ಆಶಕ್ತರು ಮತ್ತು ಕ್ಯಾನ್ಸರ್ ಪೀಡಿತರಿಗೆ ಆಹಾರ ಕಿಟ್ ವಿತರಣೆ

 

ಕೊಡವೂರು ವಾರ್ಡ್ ನಲ್ಲಿ ಆಶಕ್ತರು, ಕ್ಯಾನ್ಸರ್ ಪೀಡಿತರಿಗೆ ಮತ್ತು ಕ್ಷಯ ರೋಗಸ್ತರಿಗೆ ಪೌಷ್ಟಿಕ ಆಹಾರ ಕಿಟ್  ಕಾರ್ಯಕ್ರಮ ದಿವ್ಯಾಂಗ  ರಕ್ಷಣಾ ಸಮಿತಿಯ ವತಿಯಿಂದ ನಡೆಯುತ್ತಿದೆ. ದಿವ್ಯಾಂಗ ರಕ್ಷಣಾ  ಸಮಿತಿಯು ಈ ಭಾಗದ ಎಲ್ಲಾ ನೋವುಗಳಿಗೆ ಧ್ವನಿಯಾಗುವಂತಹದ್ದು ಆಗುತ್ತಿದೆ. ಅದರ ಜೊತೆಯಲ್ಲಿ ಬೇರೆ ಬೇರೆ ಸಂಘ ಸಂಸ್ಥೆಗಳು ಇದಕ್ಕೆ ಸಹಕಾರ ಮಾಡುವುದರ ಮುಖಾಂತರ ಕೊಡವೂರಿನಲ್ಲಿ ಇಂತಹ ಕಾರ್ಯಕ್ರಮಗಳು ಸದಾ ನಡೆಯುತ್ತಿವೆ ಎಂದು ಕೆ. ವಿಜಯ ಕೊಡವೂರು ತಿಳಿಸಿದರು.

ಎಮ್ ಸಿ ಕೆ ಎಸ್ ಫುಡ್ ಫಾರ್ ದ ಹಂಗ್ರಿ ಫೌಂಡೇಶನ್ ಬೆಂಗಳೂರು ಇವರ ವತಿಯಿಂದ  ಆರ್ಥಿಕವಾಗಿ ಹಿಂದುಳಿದವರಿಗೆ, ದಿವ್ಯಾಂಗರಿಗೆ, ಆಶಕ್ತರು, ಕ್ಯಾನ್ಸರ್ ಪೀಡಿತರಿಗೆ ಮತ್ತು ಕ್ಷಯ ರೋಗಸ್ತರು ಹೀಗೆ ಒಟ್ಟು 12 ಮಂದಿ ಫಲಾನುಭವಿಗಳಿಗೆ ಪೌಷ್ಟಿಕ ಆಹಾರ ಕಿಟ್ ವಿತರಣಾ ಕಾರ್ಯಕ್ರಮವು ಕೊಡವೂರು ವಿಪ್ರಶ್ರೀ ಸಭಾಭವನದಲ್ಲಿ ಜರುಗಿತು . 

ಈ ಸುಸಂದರ್ಭದಲ್ಲಿ ಎಮ್ ಸಿ ಕೆ ಎಸ್ ಫುಡ್ ಫಾರ್ ದ ಹಂಗ್ರಿ ಫೌಂಡೇಶನ್ ಬೆಂಗಳೂರು ಇದರ ಪ್ರಮುಖರಾದ ನಿಧಿ ಎಸ್. , ಕೊಡವೂರು ವಾರ್ಡ್ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಅಶೋಕ್ ಶೆಟ್ಟಿಗಾರ್, ಕಾರ್ಯದರ್ಶಿ ಜಯ ಪೂಜಾರಿ ಕಲ್ಮಾಡಿ , ಸಮಾಜ ಸೇವಕರಾದ ಅಖಿಲೇಶ್ ಎ, ಯು. ಆರ್. ಡಬ್ಲ್ಯೂ ಸರ್ವೋತ್ತಮ್ ಎಸ್ ಅಮೀನ್ ಉಪಸ್ಥಿತರಿದ್ದರು.ದಿವ್ಯಾಂಗ ರಕ್ಷಣಾ ಸಮಿತಿಯ ಅಧ್ಯಕ್ಷರಾದ ಹರೀಶ್ ಕೊಪ್ಪಲ್ ತೋಟ ಸ್ವಾಗತಿಸಿ - ವಂದಿಸಿದರು.

Ads on article

Advertise in articles 1

advertising articles 2

Advertise under the article