
ಗಂಗೊಳ್ಳಿ: ವರದಕ್ಷಿಣೆ ಕಾಯ್ದೆಯ ಆರೋಪಿ 23 ವರ್ಷಗಳ ಬಳಿಕ ಬಂಧನ!
21/08/2025 09:53 AM
ಗಂಗೊಳ್ಳಿ: ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 33/2002 ಕಲಂ:498ಎ,504,506,(2) ಐಪಿಸಿ ಮತ್ತು 3,4,6 ವರದಕ್ಷಣೆ ಕಾಯ್ದೆ,ಸಿ ಸಿ ನಂಬರ್ 1457/2002 ಪ್ರಕರಣದಲ್ಲಿ ಆರೋಪಿಯಾಗಿದ್ದ ವ್ಯಕ್ತಿಯನ್ನು ಪೊಲೀಸರು 23 ವರ್ಷಗಳ ಬಳಿಕ ಬಂಧಿಸಿದ್ದಾರೆ. ನಾಸೀರ್ ಖಾನ್ (52 ) ಬಂಧಿತ ವ್ಯಕ್ತಿ.ಪ್ರಸ್ತುತ ಶಿವಮೊಗ್ಗ ಜಿಲ್ಲೆಯಲ್ಲಿ ವಾಸವಿದ್ದ ಈತನ ವಿರುದ್ಧ ಪ್ರಕರಣ ದಾಖಲಾಗಿದ್ದು ಸುಮಾರು 23 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ.ಈತನನ್ನು ಹೆಚ್ ಸಿ ಕೃಷ್ಣ, ಪ್ರಸನ್ನ, ಸಂದೀಪ್ ಕುರಾಣಿ ಅವರ ಪೊಲೀಸರ ತಂಡ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರದಲ್ಲಿ ಬಂಧಿಸಿ ಕುಂದಾಪುರ ನ್ಯಾಯಾಲಯಕ್ಕೆ ಹಾಜರುಪಡಿಸಿದೆ.