
ಬೆಂಗಳೂರು: ಸ್ಪೀಕರ್ ಖಾದರ್ ಅವರನ್ನು ಭೇಟಿಯಾದ ಕರ್ನಾಟಕ ಕಾರ್ಮಿಕ ಪರಿಷತ್ ಮುಖಂಡ ರವಿ ಶೆಟ್ಟಿ ಬೈಂದೂರು
ಬೆಂಗಳೂರು: ವಿಧಾನಸಭಾಧ್ಯಕ್ಷರ ಗೃಹ ಕಚೇರಿಯಲ್ಲಿ ಸಭಾಧ್ಯಕ್ಷ ಯು ಟಿ ಖಾದರ್ ಅವರನ್ನು ಕರ್ನಾಟಕ ಕಾರ್ಮಿಕ ಪರಿಷತ್ ನ ರವಿ ಶೆಟ್ಟಿ ಬೈಂದೂರು ಭೇಟಿ ಮಾಡಿದರು.
ಕರ್ನಾಟಕದಲ್ಲಿ ದ್ವಿಭಾಷಾ ನೀತಿಗೆ ಸಂಬಂಧಪಟ್ಟಂತೆ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ವಿದ್ಯಾರ್ಥಿಗಳಿಗೆ ಒಂದೇ ರೀತಿಯ ಶಿಕ್ಷಣ ದೊರೆಯುವಂತೆ ಹಾಗೂ ಹಲವಾರು ಬದಲಾವಣೆಗಳು ಮತ್ತು ಮಾರ್ಪಾಟುಗಳನ್ನು ಮಾಡುವಂತೆ ಕರ್ನಾಟಕ ರಾಜ್ಯ ಶಿಕ್ಷಣ ಸಂಸ್ಥೆಗಳ ಸಂಘದ ಕಾರ್ಯ ಅಧ್ಯಕ್ಷರಾದ ಜೈ ಶೀಲ್ ಶೆಟ್ಟಿ ಕುಂದಾಪುರ ಅವರ ಹೋರಾಟಕ್ಕೆ ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ ಧ್ವನಿಗೂಡಿಸಿ ತನ್ನ ಸಂಪೂರ್ಣ ಬೆಂಬಲವನ್ನು ಸೂಚಿಸಿ ಸಭಾಧ್ಯಕ್ಷರಲ್ಲಿ ಶೈಕ್ಷಣಿಕ ಕ್ಷೇತ್ರಗಳಲ್ಲಿ ಆಗಬೇಕಾದ ಬದಲಾವಣೆ ಮತ್ತು ಮಾರ್ಪಾಟುಗಳ ಕುರಿತು ಚರ್ಚೆ ನಡೆಸಿ ಜೈಶೀಲ್ ಶೆಟ್ಟಿಯವರು ಮತ್ತು ಸತೀಶ್ ರವರ ಜೊತೆಗೂಡಿ ಮನವಿ ಸಲ್ಲಿಸಲಾಯಿತು.
ನಮ್ಮ ಮನವಿಯನ್ನು ಬಹಳ ತಾಳ್ಮೆಯಿಂದ ಆಲಿಸಿ, ನಾಳೆ ಸದನದಲ್ಲಿ ಈ ವಿಷಯದಲ್ಲಿ ಚರ್ಚಿಸಲು ಅವಕಾಶ ನೀಡಿ ಶಿಕ್ಷಣ ಸಚಿವರಿಂದ ಇದಕ್ಕೆ ಉತ್ತರ ನೀಡಿಸುವುದಾಗಿ ಭರವಸೆ ನೀಡಿದರು ಎಂದು ರವಿ ಶೆಟ್ಟಿ ತಿಳಿಸಿದ್ದಾರೆ.
ಅಲ್ಲದೆ ಸಭಾಧ್ಯಕ್ಷ ಸ್ಥಾನವನ್ನು ಅಲಂಕರಿಸಿ ಒಂದು ಕ್ಷೇತ್ರದ ಶಾಸಕರಾಗಿ ಹಲವಾರು ಬಾರಿ ಆಯ್ಕೆಯಾದರೂ ಸ್ವಲ್ಪ ಕೂಡ ಹಮ್ಮು ಇಲ್ಲದೆ ನಮ್ಮನ್ನು ಅವರ ಮನೆಯಲ್ಲಿ ಆತ್ಮೀಯತೆಯಿಂದ ಗಡಿಬಿಡಿಯಲ್ಲೂ ನಮ್ಮ ಜೊತೆ ಮಾತನಾಡಿ ನಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಲ್ಲಿ ಜೊತೆ ಆದ ಖಾದರ್ ಸಾಹೇಬರ ಬಗ್ಗೆ ರವಿ ಶೆಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದರು.
ನಮ್ಮನ್ನೆಲ್ಲ ಮಾತನಾಡಿಸಿ ಹೊರಬಂದು ಇನ್ನೇನು ಕಾರು ಹತ್ತಬೇಕು ಅಷ್ಟರಲ್ಲಿ ದೂರದಲ್ಲಿ ಕುಳಿತ ಒಂದು ಹೆಣ್ಣು ಮಗುವನ್ನು ನೋಡಿ ಏನಮ್ಮ ನಿನಗೆ ಏನು ಸಮಸ್ಯೆ ಆಯಿತು ಎಂದು ಅವರ ಬಳಿ ಹೋಗಿ ತಕ್ಷಣ ಸಮಸ್ಯೆಗೆ ಪರಿಹಾರ ಸೂಚಿಸಿದ್ದು ನಿಜವಾಗಿಯೂ ಅವರ ಮಾನವೀಯತೆ ಮತ್ತು ಸರಳತೆ ಹಾಗೂ ಮೌಲ್ಯತೆಗೆ ಹಿಡಿದ ಕನ್ನಡಿ ಅನ್ನಿಸಿತು ಎಂದು ರಾಜ್ಯ ಕಾರ್ಮಿಕ ಪರಿಷತ್ ನ ರವಿ ಶೆಟ್ಟಿ ಬೈಂದೂರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.