ಬೆಂಗಳೂರು: ಮತಗಳ್ಳತನ ಪ್ರತಿಭಟನೆ ಬೆನ್ನಲ್ಲೇ ಹಲವು ರಾಜ್ಯಗಳ ಚುನಾವಣಾ ಆಯೋಗದ ವೆಬ್‌ಸೈಟ್‌ ಸೇವೆಯಲ್ಲಿ ವ್ಯತ್ಯಯ- ವರದಿ

ಬೆಂಗಳೂರು: ಮತಗಳ್ಳತನ ಪ್ರತಿಭಟನೆ ಬೆನ್ನಲ್ಲೇ ಹಲವು ರಾಜ್ಯಗಳ ಚುನಾವಣಾ ಆಯೋಗದ ವೆಬ್‌ಸೈಟ್‌ ಸೇವೆಯಲ್ಲಿ ವ್ಯತ್ಯಯ- ವರದಿ

 

ಬೆಂಗಳೂರು: ಇತ್ತ ರಾಹುಲ್ ಗಾಂಧಿ ನೇತೃತ್ವದಲ್ಲಿ ಮತಗಳ್ಳತನ ಸಂಬಂಧ ಬೃಹತ್ ಪ್ರತಿಭಟನೆ ನಡೆಯುತ್ತಿದ್ದರೆ ,ಅತ್ತ  ಹಲವು ರಾಜ್ಯದಲ್ಲಿನ ಚುನಾವಣಾ ಆಯೋಗದ

ವೆಬ್‌ಸೈಟ್‌ ಸೇವೆಯಲ್ಲಿ ವ್ಯತ್ಯಯವಾಗಿದೆ ಎಂದು ನೆಟ್ಟಿಗರು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಗಳನ್ನು ಹಂಚಿಕೊಂಡಿದ್ದಾಗಿ ವರದಿಯಾಗಿದೆ.ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು, 2024ರ ಲೋಕಸಭಾ ಚುನಾವಣೆಯಲ್ಲಿ ಮತಗಳ್ಳತನವಾಗಿದೆ. ಬಿಜೆಪಿಯು ಚುನಾವಣೆಗಳನ್ನು ಗೆಲ್ಲಲು ಚುನಾವಣಾ ಆಯೋಗ ಸಾಥ್ ನೀಡಿದೆ ಎಂದು ನಿನ್ನೆ ದಾಖಲೆ ಸಮೇತ ಆರೋಪಿಸಿದ್ದರು. ಇದರ ಬೆನ್ನಲ್ಲೇ, ಹಲವು ರಾಜ್ಯಗಳಲ್ಲಿ ಚುನಾವಣಾ ಆಯೋಗದ ವೆಬ್‌ಸೈಟ್‌ ಸ್ಥಗಿತಗೊಂಡಿರುವುದಾಗಿ ವರದಿಯಾಗಿದೆ.

#VoteChori ಟ್ಯಾಗ್ ಬಳಸಿ ಟ್ವೀಟ್ ಮಾಡಿರುವ ಹಲವರು, 'ಮಹಾರಾಷ್ಟ್ರ, ಬಿಹಾರ, ಮಧ್ಯಪ್ರದೇಶ ಮತ್ತು ರಾಜಸ್ಥಾನದಂತಹ ರಾಜ್ಯಗಳಲ್ಲಿ ಚುನಾವಣಾ ಆಯೋಗದ ವೆಬ್‌ಸೈಟ್‌ನ ಇ-ವೋಟರ್ ಪಟ್ಟಿ ಓಪನ್ ಆಗುತ್ತಿಲ್ಲ. ಜನರು ಇದೀಗ, ರಾಹುಲ್ ಆರೋಪಗಳನ್ನು ನಂಬುತ್ತಾರೆ. ಬಿಜೆಪಿಯ ಭಕ್ತರು ಏನಾದರೂ ಹೇಳಲು ಬಯಸುವರೇ' ಎಂದು ಕೇಳಿದ್ದಾರೆ.

ಇದಕ್ಕೆ ಸಂಬಂಧಿಸಿದ ಸ್ಟ್ರೀನ್‌ಶಾಟ್‌ಗಳನ್ನು ಸಾಕಷ್ಟು ನೆಟ್ಟಿಗರು ಹಂಚಿಕೊಂಡು ಸಮಸ್ಯೆಯನ್ನು ಪ್ರಸ್ತಾಪಿಸಿದ್ದಾರೆ.

Ads on article

Advertise in articles 1

advertising articles 2

Advertise under the article