
ಬೆಂಗಳೂರು: ಯೂಟ್ಯೂಬರ್ ಸಮೀರ್ ಎಂಡಿ ಸದ್ಯ ನಿರಾಳ- ನಿರೀಕ್ಷಣಾ ಜಾಮೀನು ಮಂಜೂರು- ಬಂಧನದಿಂದ ಪಾರು
21/08/2025 12:33 PM
ಬೆಂಗಳೂರು: ಬಂಧನ ಭೀತಿ ಎದುರಿಸುತ್ತಿದ್ದ ಯೂಟ್ಯೂಬರ್ ಸಮೀರ್ ಎಂ.ಡಿ.ಗೆ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.ಇದರಿಂದ ಸಮೀರ್ ಬಂಧನದಿಂದ ಪಾರಾಗಿದ್ದಾರೆ.
ನಿರೀಕ್ಷಣಾ ಜಾಮೀನು ಕೋರಿ ಆಗಸ್ಟ್ 19ರಂದು ಸಮೀರ್ ಎಂಡಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಮಂಗಳೂರು ಜಿಲ್ಲಾ ಸತ್ರ ನ್ಯಾಯಾಲಯಕ್ಕೆ ಅರ್ಜಿಯನ್ನು ಹಾಕಿದ್ದರು. ಇದೀಗ ಆಗಸ್ಟ್ 21ರಂದು ಗುರುವಾರ ಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.ಧರ್ಮಸ್ಥಳ ವಿಷಯದಲ್ಲಿ ಸಮೀರ್ ಧಾರ್ಮಿಕ ಭಾವನೆಗೆ ಧಕ್ಕೆ ತರುವ ಸುದ್ದಿ ಮಾಡಿದ್ದಾಗಿ ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು.ಈ ಸಂಬಂಧ ಇಂದು ಅವರನ್ನು ಬಂಧಿಸಲು ಪೊಲೀಸರು ಸಿದ್ಧತೆ ನಡೆಸಿದ್ದರು. ಅವರ ಬೆಂಗಳೂರಿನ ಮನೆಗೂ ಹೋಗಿದ್ದರು. ಆದರೆ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿರುವುದರಿಂದ ಬೀಸುವ ದೊಣ್ಣೆಯಿಂದ ಸಮೀರ್ ಪಾರಾಗಿದ್ದಾರೆ.