ಬೆಂಗಳೂರು: ಮುಖ್ಯಮಂತ್ರಿ ವಿರುದ್ದ ಅಶ್ಲೀಲ ಪದ ಬಳಕೆ: ಸಹಾಯಕ ಅರ್ಚಕ ಬಂಧನ

ಬೆಂಗಳೂರು: ಮುಖ್ಯಮಂತ್ರಿ ವಿರುದ್ದ ಅಶ್ಲೀಲ ಪದ ಬಳಕೆ: ಸಹಾಯಕ ಅರ್ಚಕ ಬಂಧನ

 


ಬೆಂಗಳೂರು: ಮೈಸೂರು ದಸರಾ ಉದ್ಘಾಟನೆಗೆ ಬೂಕರ್ ಪ್ರಶಸ್ತಿ ವಿಜೇತೆ ಲೇಖಕಿ ಬಾನು ಮುಷ್ತಾಕ್ ಆಯ್ಕೆ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಕುರಿತು ಅಶ್ಲೀಲ ಮಾತುಗಳನ್ನಾಡಿದ್ದ ಅರ್ಚಕನನ್ನು ನಗರದ ಕೆಂಗೇರಿ ಠಾಣೆ ಪೊಲೀಸರು ಶನಿವಾರ ಬಂಧಿಸಿದ್ದಾರೆ.

ಕೆಂಗೇರಿ ಉಪನಗರದ ಶ್ರೀರಾಘವೇಂದ್ರ ಸ್ವಾಮಿ ಮಠದ ಪಕ್ಕದಲ್ಲಿರುವ ಗಣಪತಿ ದೇವಸ್ಥಾನದ ಸಹಾಯಕ ಅರ್ಚಕ ಗುರುರಾಜ್ ಬಂಧಿತ. ಮೈಸೂರು ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಅವರನ್ನು ಸರಕಾರ ಆಯ್ಕೆ ಮಾಡಿದ ವಿಷಯದ ಬಗ್ಗೆ ಯೂಟ್ಯೂಬೊಂದರಲ್ಲಿ ಮಾತನಾಡಿದ್ದ ಅರ್ಚಕ ಗುರುರಾಜ್, ಮುಖ್ಯಮಂತ್ರಿಗಳನ್ನು ಉದ್ದೇಶಿಸಿ ಅತ್ಯಂತ ಕೀಳುಮಟ್ಟದ ಪದ ಪ್ರಯೋಗಿಸಿ ನಿಂದಿಸಿದ್ದ. ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಗುರುರಾಜ್ ವಿರುದ್ಧ ಸಮಾಜದ ಶಾಂತಿ ಕದಡಲು ಯತ್ನ ಹಾಗೂ ಕೋಮು ಸಾಮರಸ್ಯಕ್ಕೆ ಧಕ್ಕೆ ತರುವ ಆರೋಪದಡಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ಬಂಧಿಸಲಾಗಿದೆ.

ಶ್ರೀರಾಘವೇಂದ್ರ ಸ್ವಾಮಿ ಸೇವಾ ಸಮಿತಿ, ಅರ್ಚಕ ಗುರುರಾಜ್ ಹೇಳಿಕೆಯನ್ನು ಖಂಡಿಸಿದೆ. ಜತೆಗೆ ಅವರನ್ನು ಅರ್ಚಕ ಸ್ಥಾನದಿಂದ ಅಮಾನತುಗೊಳಿಸಲಾಗಿದೆ ಎಂದು ತಿಳಿಸಿದೆ.

Ads on article

Advertise in articles 1

advertising articles 2

Advertise under the article