
ಉಡುಪಿ: ಆನ್ ಲೈನ್ ನಲ್ಲಿ ವಿಡಿಯೋ ಕರೆ ಮಾಡಿ ವಂಚನೆ - ಆರೋಪಿ ಸೆರೆ ,ಅಪ್ರಾಪ್ತ ಬಾಲಕ ಪೊಲೀಸ್ ವಶಕ್ಕೆ- 2 ಲಕ್ಷ ನಗದು ವಶ
23/08/2025 03:28 PM
ಉಡುಪಿ: ವಿಡಿಯೋ ಕಾಲ್ ಮಾಡಿ ,ಬಳಿಕ ನಗ್ನ ವಿಡಿಯೋಗೆ ಮುಖ ಮಾರ್ಪಿಂಗ್ ಮಾಡಿ ವ್ಯಕ್ತಿಯೊಬ್ಬರ ವಾಟ್ಸಾಪ್ ಗೆ ಕಳಿಸಿ ಬೆದರಿಸಿ 5 ಲಕ್ಷ ರೂ.ಲಪಟಾಯಿಸಿದ ಪ್ರಕರಣದಲ್ಲಿ ಓರ್ವ ವಂಚಕನನ್ನು ಪೊಲೀಸರು ಬಂಧಿಸಿದ್ದಾರೆ.
ಪೊಲೀಸರ ವಿಶೇಷ ತಂಡ ಕಾರ್ಯಾಚರಣೆ ನಡೆಸಿ ರಾಜಸ್ತಾನ ಮೂಲದ ಜೈದ್ ಮೊಹಮ್ಮದ್ (19 ) ಎಂಬಾತನನ್ನು ಬಂಧಿಸಿದೆ. ಈ ಪ್ರಕರಣದಲ್ಲಿ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನನ್ನೂ ವಶಕ್ಕೆ ಪಡೆಯಲಾಗಿದೆ. ಬಂಧಿತರಿಂದ ಒಟ್ಟು 5 ಮೊಬೈಲ್ ಪೋನ್ ಗಳು ಹಾಗೂ 2,00,000 ರೂ. ನಗದನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಪ್ರಕರಣದ ಇತರ ಆರೋಪಿಗಳು ತಲೆಮರೆಸಿಕೊಂಡಿದ್ದು ಅವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಈ ಸಂಬಂಧ ಉಡುಪಿ ಸೆನ್ ಪೊಲೀಸ್ ಠಾಣೆಯಲ್ಲಿ ಅ.ಕ್ರ.41/2025 ಕಲಂ: 308(2), 318(4) ಬಿ ಎನ್ ಎಸ್ ಹಾಗೂ 66(ಇ), ಐ.ಟಿ. ಆಕ್ಟ್ ರಂತೆ ಪ್ರಕರಣ ದಾಖಲಾಗಿದೆ.