ಸನಾ: ಕೇರಳ ನರ್ಸ್ ನಿಮಿಷಾ ಪ್ರಿಯಾ ಮರಣದಂಡನೆ ರದ್ದು- ವರದಿ

ಸನಾ: ಕೇರಳ ನರ್ಸ್ ನಿಮಿಷಾ ಪ್ರಿಯಾ ಮರಣದಂಡನೆ ರದ್ದು- ವರದಿ

 

ಸನಾ: ‘ಭಾರತ ಮತ್ತು ಯೆಮೆನ್‌ನ ಅಧಿಕಾರಿಗಳ ಹಗಲಿರುಳು ಪರಿಶ್ರಮದ ಫಲವಾಗಿ ಕೇರಳದ ಶುಶ್ರೂಷಕಿ ನಿಮಿಷಾ ಪ್ರಿಯಾ ಅವರಿಗೆ ವಿಧಿಸಲಾಗಿದ್ದ ಮರಣದಂಡನೆ ಶಿಕ್ಷೆಯನ್ನು ಯೆಮೆನ್ ಸರ್ಕಾರ ರದ್ದುಗೊಳಿಸಿದೆ’ ಎಂದು ಗ್ಲೋಬಲ್‌ ಪೀಸ್‌ ಇನ್‌ಷಿಯೇಟಿವ್‌ ಸಂಸ್ಥಾಪಕ ಮತ್ತು ಧಾರ್ಮಿಕ ಗುರು ಡಾ. ಕೆ.ಎ. ಪೌಲ್‌ ಹೇಳಿದ್ದಾರೆ.

ಈ ಕುರಿತು ವಿಡಿಯೊ ಸಂದೇಶ ಬಿಡುಗಡೆ ಮಾಡಿರುವ ಅವರು, ‘ಯೆಮೆನ್‌ ನಾಯಕರ ಪರಿಣಾಮಕಾರಿ ಮತ್ತು ಪ್ರಾರ್ಥನಾಪೂರ್ವಕ ಪ್ರಯತ್ನದಿಂದಾಗಿ ಇದು ಸಾಧ್ಯವಾಗಿದೆ. ನಿಮಿಷ ಪ್ರಿಯಾ ಅವರ ಪ್ರಾಣ ಉಳಿಸಲು ಕಳೆದ ಹತ್ತು ದಿನಗಳಲ್ಲಿ ನಾಯಕರು ಪಟ್ಟ ಶ್ರಮ ಅಷ್ಟಿಷ್ಟಲ್ಲ. ಈ ಪ್ರಕ್ರಿಯೆಯಲ್ಲಿ ಪಾಲ್ಗೊಂಡ ಎಲ್ಲಾ ನಾಯಕರಿಗೂ ಧನ್ಯವಾದಗಳು. ಇದರಲ್ಲಿ ಭಾರತದ ಪ್ರಯತ್ನವೂ ಸಾಕಷ್ಟಿದೆ. ದೇವರ ದಯೆಯಿಂದ ನಿಮಿಷ ಬಿಡುಗಡೆಯಾಗಲಿದ್ದಾರೆ. ನಿಮಿಷ ಅವರನ್ನು ಕಾನೂನುಬದ್ಧವಾಗಿ ಮತ್ತು ಸುರಕ್ಷಿತವಾಗಿ ಕರೆದೊಯ್ಯಬಹುದು’ ಎಂದು ಹೇಳಿದ್ದಾರೆ.

‘ಸನಾ ಜೈಲಿನಲ್ಲಿರುವ ನಿಮಿಷ ಅವರನ್ನು ಒಮಾನ್‌, ಜೆಡ್ಡಾ, ಈಜಿಪ್ಟ್‌, ಇರಾನ್ ಅಥವಾ ಟರ್ಕಿಗೆ ಕರೆದೊಯ್ಯಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಿರುವ ಭಾರತಕ್ಕೆ ಅಗತ್ಯ ಸಹಕಾರ ನೀಡಲಾಗುವುದು’ ಎಂದು ಡಾ. ಪೌಲ್ ತಿಳಿಸಿದ್ದಾರೆ.

Ads on article

Advertise in articles 1

advertising articles 2

Advertise under the article