
ಮಣಿಪಾಲ: ಖ್ಯಾತ ಥೆರಪಿಸ್ಟ್ ಮತ್ತು ಟ್ರೈನರ್ ತನುಜಾ ಮಾಬೆನ್ ಅವರ " ರೀ ಡಿಸೈನ್ ಯುವರ್ ಮೈಂಡ್ " ಪುಸ್ತಕ ಬಿಡುಗಡೆ
ಮಣಿಪಾಲ: 'ರೀ ಡಿಸೈನ್ ಯುವರ್ ಮೈಂಡ್' ಎಂಬ ಕಾರ್ಯಾಗಾರ ಇಂದು ಮಣಿಪಾಲದಲ್ಲಿ ಆಯೋಜಿಸಲಾಯಿತು.ಮಣಿಪಾಲದ ಟೀ ಟ್ರೀ ಸೂಟ್ಸ್ ಹೊಟೇಲಿನಲ್ಲಿ ಈ ಕಾರ್ಯಾಗಾರವನ್ನು ಖ್ಯಾತ ಥೆರಪಿಸ್ಟ್ ಮತ್ತು ಟ್ರೈನರ್ ತನುಜಾ ಮಾಬೆನ್ ಆಯೋಜಿಸಿದ್ದರು.
ಮೂರು ಗಂಟೆಗಳ ಈ ಕಾರ್ಯಾಗಾರ ನೆರೆದ ಜನರನ್ನು ಸೆಳೆಯುವಲ್ಲಿ ಯಶಸ್ವಿಯಾಯಿತು.
ನಮ್ಮ ಬಹುತೇಕ ಯೋಚನೆಗಳು, ಹವ್ಯಾಸಗಳು ಮತ್ತು ಭಾವನೆಗಳು ಬಾಲ್ಯದಲ್ಲೇ ರೂಪುಗೊಂಡಿರುತ್ತವೆ ಎಂಬುದರ ಬಗ್ಗೆ ಕಾರ್ಯಾಗಾರ ಬೆಳಕು ಚೆಲ್ಲಿತು. ಹೀಗೆ ಬಾಲ್ಯದಲ್ಲಿ ನಮ್ಮ ಮೇಲಾದ ಪ್ರಭಾವ,ನಾವು ದೊಡ್ಡವರಾದ ಮೇಲೂ ಮುಂದುವರೆಯುತ್ತದೆ ಎಂಬುದನ್ನು ತನುಜಾ ಮಾಬೆನ್ ಮನಮುಟ್ಟುವಂತೆ ವಿಶ್ಲೇಷಣೆ ಮಾಡಿದರು.
ಬಾಲ್ಯದಲ್ಲಿ ನಮ್ಮ ಮೇಲಾಗುವ ಬಗೆಬಗೆಯ ಪರಿಣಾಮಗಳು ನಮ್ಮ ವ್ಯಕ್ತಿತ್ವವನ್ನು ನಿರ್ಮಾಣ ಮಾಡುತ್ತವೆ.ಹೀಗಾಗಿ ಒಬ್ಬ ವ್ಯಕ್ತಿ ಯಾವ ರೀತಿ ರೂಪುಗೊಳ್ಳುತ್ತಾನೆ ಅಥವಾ ರೂಪುಗೊಳ್ಳುತ್ತಾಳೆ ಎಂಬುದು ಆ ವ್ಯಕ್ತಿಯ ಬಾಲ್ಯ ಹೇಗಿತ್ತು ಎಂಬುದರ ಮೇಲೆ ಅವಲಂಬಿಸಿದೆ ಎಂದರು.
ನಕಾರಾತ್ಮಕ ಯೋಚನೆಗಳಿಂದ ಹೊರಬಂದಾಗ ಬದುಕು ಸುಂದರವಾಗಿ ಕಾಣುತ್ತದೆ. ನಮ್ಮ ಆಂತರಿಕ ಶಕ್ತಿ ಮತ್ತು ಸಾಮರ್ಥ್ಯ ಇನ್ನೆಲ್ಲೋ ಇಲ್ಲ, ಅದು ನಮ್ಮೊಳಗೇ ಇರುತ್ತದೆ ಎಂದರು. ಕಾರ್ಯಾಗಾರದಲ್ಲಿ ಭಾಗವಹಿಸಿದ ಹಲವು ಜನ ತಮ್ಮ ಬದುಕು,ಯೋಚನೆ, ಯೋಜನೆಗಳ ಬಗ್ಗೆ ಮಾಬೆನ್ ಜೊತೆ ಸಮಾಲೋಚನೆ ನಡೆಸಿ ಖುಷಿಪಟ್ಟರು.ಇದೇ ವೇಳೆ ಅವರ ಹೊಸ ಪುಸ್ತಕ ರೀ ಡಿಸೈನ್ ಯುವರ್ ಮೈಂಡ್ ಬಿಡುಗಡೆಗೊಂಡಿತು.