
ಉಡುಪಿ: ನಗರದೆಲ್ಲಡೆ ಡ್ರೈನೇಜ್ ಸಮಸ್ಯೆ- ದುರಸ್ತಿಗೆ ಸಾರ್ವಜನಿಕರ ಆಗ್ರಹ
25/07/2025 05:49 AM
ಉಡುಪಿ; ನಗರದ ಚಿತ್ತರಂಜನ್ ಸರ್ಕಲ್ ನಿಂದ ಪ್ರಾರಂಭಗೊಂಡು, ರಿಲೆಯನ್ಸ್ ಮಳಿಗೆಯವರೆಗೆ ಡ್ರೈನೀಜ್ ನೀರು ರಸ್ತೆಯಲ್ಲೇ ಹರಿಯುತ್ತಿದ್ದು, ತಕ್ಷಣ ನಗರಸಭೆ ಇದನ್ನು ದುರಸ್ತಿ ಪಡಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಸಮಸ್ಯೆ ಉದ್ಭವವಾದ ರಸ್ತೆಯ ಉದ್ದಕ್ಕೂ ಹಲವಾರು ಡ್ರೈನೇಜ್ ಚೇಂಬರುಗಳಿದ್ದು, ಎಲ್ಲಾ ಚೇಂಬರುಗಳ ಒಳಗಡೆ ಹೆಗ್ಗಣಗಳು ಕೊರೆದು ಮಣ್ಣು ತುಂಬಿದೆ. ಅದನ್ನು ತೆಗೆಯಲು ನಗರಸಭೆಯ ವಾಹನ ಇದ್ದರೂ ಅದು ಕೆಟ್ಟು ನಿಂತಿದೆ. ಆದ್ದರಿಂದ ಅದನ್ನು ಕಾರ್ಮಿಕರೇ ಕೈಯಿಂದ ಹಾರೆಯಲ್ಲಿ ತೆಗೆಯುವ ಪರಿಸ್ಥಿತಿ ಉದ್ಭವವಾಗಿದೆ. ಸದ್ಯ ಮಳೆ ನೀರು ಹೊರಬಂದು, ರಸ್ತೆಯಲ್ಲೇ ಹರಿಯುತ್ತಿದೆ. ಪಾದಚಾರಿಗಳು ಕೊಳಚೆ ನೀರಿನಲ್ಲೇ ಮೂಗು ಮುಚ್ಚಿಕೊಂಡು ನಡೆದಾಡ ಬೇಕಾದ ಪರಿಸ್ಥಿತಿ ಇದ್ದು ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ. ನಗರದ ಈ ಪ್ರಮುಖ ಸಮಸ್ಯೆಯನ್ನು ಸರಿಪಡಿಸಿ ನಾಗರಿಕರ ಅರೋಗ್ಯವನ್ನು ಕಾಪಾಡ ಬೇಕು ಎಂದು ಸ್ಥಳೀಯರು ನಗರಸಭೆಯನ್ನು ಆಗ್ರಹಿಸಿದ್ದಾರೆ.