ಮಣಿಪಾಲ: ಪ್ಯಾಂಟ್ ಧರಿಸದೆ ದ್ವಿಚಕ್ರವಾಹನದಲ್ಲಿ ಸವಾರಿ ಮಾಡಿದ ವ್ಯಕ್ತಿ - ಮಣಿಪಾಲದಲ್ಲೊಂದು ಅಚ್ಚರಿಯ ಘಟನೆ !

ಮಣಿಪಾಲ: ಪ್ಯಾಂಟ್ ಧರಿಸದೆ ದ್ವಿಚಕ್ರವಾಹನದಲ್ಲಿ ಸವಾರಿ ಮಾಡಿದ ವ್ಯಕ್ತಿ - ಮಣಿಪಾಲದಲ್ಲೊಂದು ಅಚ್ಚರಿಯ ಘಟನೆ !

 

ಮಣಿಪಾಲ: ವ್ಯಕ್ತಿಯೊಬ್ಬರು ಪ್ಯಾಂಟ್ ಧರಿಸದೆ ದ್ವಿಚಕ್ರವಾಹನದಲ್ಲಿ ಹೋಗುತ್ತಿರುವ ವಿಡಿಯೋ ವೈರಲ್ ಆಗಿದೆ. ನಡುವಯಸ್ಸಿನ ಈ ವ್ಯಕ್ತಿ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ರಸ್ತೆಯಲ್ಲಿ ಪ್ಯಾಂಟ್ ಧರಿಸದೆ ದ್ವಿಚಕ್ರ ವಾಹನದಲ್ಲಿ ಹೋಗುವ ದೃಶ್ಯ ಕಂಡು ಬಂದಿದೆ. ಈ ವ್ಯಕ್ತಿ ಯಾರು, ಅವರು ಈ ರೀತಿ ಪ್ರಯಾಣಿಸುತ್ತಿರುವುದಕ್ಕೆ ಕಾರಣವೇನು ಎಂದು ಪತ್ತೆಯಾಗಿಲ್ಲ. ಈ ಕುರಿತು ಮಣಿಪಾಲ ಪೊಲೀಸರಿಗೆ ಮಾಹಿತಿ ಲಭ್ಯವಾಗಿದ್ದು ವ್ಯಕ್ತಿಯನ್ನು ಗುರುತಿಸಿ ಕಾರಣ ತಿಳಿಯಲು ಪ್ರಯತ್ನಿಸಲಾಗುತ್ತಿದೆ.  ಕಾರಿನಲ್ಲಿ ಹೋಗುತ್ತಿದ್ದವರು ಈ ದೃಶ್ಯವನ್ನು ಸೆರೆ ಹಿಡಿದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

Ads on article

Advertise in articles 1

advertising articles 2

Advertise under the article