
ಉಡುಪಿ: ಆನ್‌ಲೈನ್ ವಂಚಕರಿಂದ ವ್ಯಕ್ತಿಗೆ ಬರೋಬ್ಬರಿ 6.05 ಲಕ್ಷ ರೂ. ವಂಚನೆ !
26/07/2025 12:20 PM
ಉಡುಪಿ: ಆನ್‌ಲೈನ್ ವಂಚಕರ ಬಲೆಗೆ ಮತ್ತೊಬ್ಬರು ಬಿದ್ದಿದ್ದು ಮೇ 29ರಿಂದ ಜು.15ರ ನಡುವಿನ ಅವಧಿಯಲ್ಲಿ ಒಟ್ಟು 6.05 ಲಕ್ಷ ರೂ.ಗಳನ್ನು ಕಳೆದುಕೊಂಡಿದ್ದಾರೆ. ಗೌರೀಶ್ ಎಂಬವರೇ ವಂಚನೆಗೊಳಗಾದವರು.
ಕಳೆದ ಮೇ ತಿಂಗಳಲ್ಲಿ ಯೂಟ್ಯೂಬ್‌ನ್ನು ನೋಡುತ್ತಿರುವಾಗ ಮನೆಯಲ್ಲಿದ್ದೇ 1000ರೂನಿಂದ 3000 ರೂ.ಸಂಪಾದಿಸಿ ಎಂಬ ಜಾಹಿರಾತು ನೋಡಿ, ಅದರ ಲಿಂಕ್ ಮೂಲಕ ಆನ್‌ಲೈನ್ ಮನಿ ಎಂಬ ಆ್ಯಪ್‌ಗೆ ಹೋಗಿ ಅಲ್ಲಿ ಅವರು ನೀಡಿದ ಟಾಸ್ಕ್ ಗೆ ಹಂತ ಹಂತವಾಗಿ ಗೂಗಲ್ ಪೇ ಹಾಗೂ ಅಂತಾರಾಷ್ಟ್ರೀಯ ಟ್ರಾನ್ಸೆಷನ್ ಮೂಲಕ ಒಟ್ಟು 6 ಲಕ್ಷ ರೂಗಳನ್ನು ಅವರು ಹೇಳಿದ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಿದ್ದರು.ಬಳಿಕ ವಂಚನೆಗೆ ಒಳಗಾಗಿದ್ದು ಈ ಬಗ್ಗೆ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.