ಚೆನ್ನೈ: 2026ರ ವಿಧಾನಸಭೆ ಚುನಾವಣೆ-   ವೋಟ್ ವೈಬ್ ಸಂಸ್ಥೆಯ ಚುನಾವಣಾಪೂರ್ವ ಸಮೀಕ್ಷೆ - ಡಿಎಂಕೆಗೆ ಆಡಳಿತ ವಿರೋಧಿ ಅಲೆ?

ಚೆನ್ನೈ: 2026ರ ವಿಧಾನಸಭೆ ಚುನಾವಣೆ- ವೋಟ್ ವೈಬ್ ಸಂಸ್ಥೆಯ ಚುನಾವಣಾಪೂರ್ವ ಸಮೀಕ್ಷೆ - ಡಿಎಂಕೆಗೆ ಆಡಳಿತ ವಿರೋಧಿ ಅಲೆ?

 

ಚೆನ್ನೈ:  ಖಾಸಗಿ  ಸಂಸ್ಥೆ ‘ವೋಟ್ ವೈಬ್’  2026ರ  ವಿಧಾನಸಭಾ ಚುನಾವಣಾ ಪೂರ್ವ ಸಮೀಕ್ಷೆಯೊಂದನ್ನು ನಡೆಸಿದೆ. ಸಮೀಕ್ಷೆಯ ಪ್ರಕಾರ ಪ್ರತಿಕ್ರಿಯಿಸಿದವರಲ್ಲಿ, ಶೇ.32ರಷ್ಟು ಜನರು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ವಿರುದ್ಧ ಆಡಳಿತ ವಿರೋಧಿ ಭಾವನೆಯನ್ನು ವ್ಯಕ್ತಪಡಿಸಿದ್ದಾರೆ. ಮಹಿಳೆಯರ ಪೈಕಿ ಶೇ. 29ರಷ್ಟು ಆಡಳಿತ ವಿರೋಧಿ ಭಾವನೆ ಹೊಂದಿದ್ದರೆ, ಪುರುಷರು ಶೇ.34ರಷ್ಟು ವಿರೋಧಿ ಭಾವನೆ ಹೊಂದಿದ್ದಾರೆ. ಆಡಳಿತದ ಪರವಾಗಿ ಶೇ.17.9ರಷ್ಟು ಮಂದಿ ಆಡಳಿತದ ಬಗ್ಗೆ ಒಳ್ಳೆಯ ಅಭಿಪ್ರಾಯ ಹೊಂದಿದ್ದಾರೆ. ಶೇ. 15ರಷ್ಟ ಪುರುಷರು, ಹಾಗೂ ಶೇ.18ರಷ್ಟು ಮಹಿಳೆಯರು ಆಡಳಿತದ ವಿರೋಧವಾಗಿಯೂ ಅಥವಾ ಪರವಾಗಿಯೂ ಪ್ರತಿಕ್ರಿಯೆ ನೀಡದೆ ತಟಸ್ಥ ನಿಲುವು ವ್ಯಕ್ತಪಡಿಸಿದ್ದಾರೆ.

ಇನ್ನು ವಯಸ್ಸಿನ ವಿಚಾರಕ್ಕೆ ಬಂದರೆ 25 ರಿಂದ 34 ವರ್ಷದೊಳಗಿನ ಶೇ.40ರಷ್ಟು ಯುವಕರು ಪ್ರಸ್ತುತ ಸರ್ಕಾರದ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ. 18, 24 ವರ್ಷದೊಳಗಿನ ಶೇ.29ರಷ್ಟು ಜನರು ಆಡಳಿತ ಸರ್ಕಾರದ ವಿರುದ್ಧ ಮಾತನಾಡಿದ್ದಾರೆ. ಹಾಗೆಯೇ 45-54 ವರ್ಷ ವಯಸ್ಸಿನ ಶೇ.32ರಷ್ಟು ಮಂದಿ ಪ್ರಸ್ತುತ ಆಡಳಿತದ ವಿರುದ್ಧವಾಗಿದ್ದಾರೆ. ಹಾಗೆಯೇ 45-54 ವರ್ಷ ವಯಸ್ಸಿನ ಶೇ.22ರಷ್ಟು ಮಂದಿ ಆಡಳಿತ ಸರ್ಕಾರದ ಪರವಾಗಿ ಮಾತನಾಡಿದ್ದಾರೆ. 25-34 ವರ್ಷ ವಯಸ್ಸಿನ ಯುವಕರ ಪೈಕಿ ಶೇ.12ರಷ್ಟು ಮಂದಿ ಮಾತ್ರ ಸರ್ಕಾರದ ಪರವಾಗಿದ್ದಾರೆ.

ಆಡಳಿತ ಸರ್ಕಾರದ ಶಾಸಕರ ವಿಚಾರಕ್ಕೆ ಬಂದರೆ ಶೇ.38.9ರಷ್ಟು ಮಂದಿ ಶಾಸಕರ ಕಾರ್ಯ ವೈಖರಿ ಬಗ್ಗೆ ಅತೃಪ್ತರಾಗಿದ್ದಾರೆ. ಶೇ.42 ಪುರುಷರು ಹಾಗೂ ಶೇ.36ರಷ್ಟು ಮಹಿಳೆಯರು ಶಾಸಕರು ತಮ್ಮ ಕ್ಷೇತ್ರದಲ್ಲಿ ಸರಿಯಾಗಿ ಕೆಲಸ ಮಾಡಿಲ್ಲವೆಂದೇ ಅಭಿಪ್ರಾಯಪಟ್ಟಿದ್ದಾರೆ.

ಇನ್ನು ವಯಸ್ಸಿನ ವಿಚಾರಕ್ಕೆ ಬಂದರೆ 55ವರ್ಷ ಮೇಲ್ಪಟ್ಟವರೇ ಹೆಚ್ಚಾಗಿ ಶಾಸಕರ ಕೆಲಸವು ತೃಪ್ತಿ ತಂದಿಲ್ಲ ಎಂದಿದ್ದಾರೆ. ಶೇ.48ರಷ್ಟು ಮಂದಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 45-54 ವರ್ಷದೊಳಗಿನ ಶೇ.42ರಷ್ಟು ಮಂದಿ ಕೂಡ ಇದೇ ಅಭಿಪ್ರಾಯ ಹೊಂದಿದ್ದಾರೆ. ಕೇವಲ ಶೇ. 10-11ರಷ್ಟು ಮಂದಿ ಮಾತ್ರ ಶಾಸಕರ ಕಾರ್ಯವೈಖರಿ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ತಮಿಳುನಾಡಿನಲ್ಲಿ ಡಿಎಂಕೆಯೇ ಅಧಿಕಾರಕ್ಕೆ ಬರಬೇಕು ಎಂದು ಶೇ41ರಷ್ಟು ಮಹಿಳೆಯರು, 33ರಷ್ಟು ಪುರುಷರು ಅಭಿಪ್ರಾಯಪಟ್ಟಿದ್ದಾರೆ. ಎಐಎಡಿಎಂಕೆ ಅಧಿಕಾರಕ್ಕೆ ಬರಬೇಕೆಂದು ಶೇ,28ರಷ್ಟು ಮಹಿಳೆಯರು, 36ರಷ್ಟು ಪುರುಷರು ಅಭಿಪ್ರಾಯಪಟ್ಟಿದ್ದಾರೆ. ಟಿವಿಕೆ ಬಗ್ಗೆ ಶೇ.13ರಷ್ಟು ಮಹಿಳೆಯರು, ಶೇ.11ರಷ್ಟು ಪುರುಷರು ಅಭಿಪ್ರಾಯಪಟ್ಟಿದ್ದಾರೆ.

Ads on article

Advertise in articles 1

advertising articles 2

Advertise under the article