ಬಹರೈನ್ ಬಿಲ್ಲವ ಸಂಘದ ನಿಕಟಪೂರ್ವ ಅಧ್ಯಕ್ಷ ಹರೀಶ್ ಪೂಜಾರಿ , ಇದರ ಪ್ರಧಾನ ಕಾರ್ಯದರ್ಶಿ ಮತ್ತು ಅವರ ಮಾತೃಶ್ರೀ ಅವರ ಉಪಸ್ಥಿತಿಯಲ್ಲಿ ಶ್ರೀಜಾ ಕೋಟ್ಯಾನ್ ಮತ್ತು ನಿಶಾನ್ ಎಂಬ ಎರಡು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಬಹರೈನ್ ಬಿಲ್ಲವ ಸಂಘದ ವತಿಯಿಂದ ಸಹಾಯಧನ ಹಸ್ತಾಂತರ ಮಾಡಿದರು.ಈ ಸಂದರ್ಭದಲ್ಲಿ ರೋಟರಿ ಅಧ್ಯಕ್ಷ ಟಿ.ರಾಮಪೂಜಾರಿ ,ಹರೀಶ್ ಪೂಜಾರಿ ,ಕುಲದೀಪ್ ಮತ್ತವರ ಮಾತೃಶ್ರೀ ಮತ್ತು ಸಾವಿತ್ರಿ ಗಣೇಶ್ , ಪ್ರಭಾ ಉಪಸ್ಥಿತರಿದ್ದರು. ಬಿಲ್ಲವ ಮುಖಂಡೆ ,ಸಾಮಾಜಿಕ ಕಾರ್ಯಕರ್ತೆ ಗೀತಾಂಜಲಿ ಸುವರ್ಣ ಅವರ ನಿವಾಸದಲ್ಲಿ ಈ ಕಾರ್ಯಕ್ರಮ ನಡೆಯಿತು. ಗೀತಾಂಜಲಿ ಸುವರ್ಣ ಸ್ವಾಗತಿಸಿ ವಂದಿಸಿದರು.ಮುಂದಿನ ದಿನಗಳಲ್ಲಿ ಇನ್ನಷ್ಟು ಮಕ್ಕಳಿಗೆ ಸಹಾಯಧನ ನೀಡುವ ಭರವಸೆಯನ್ನು ಬಹರೈನ್ ಬಿಲ್ಲವ ಸಂಘದ ಪದಾಧಿಕಾರಿಗಳು ನೀಡಿದರು.ಬಹರೈನ್ ಬಿಲ್ಲವ ಸಂಘದ ಅಧ್ಯಕ್ಷ ರಾಜ್ ಸುವರ್ಣ ಅವರ ಮಾರ್ಗದರ್ಶನದಲ್ಲಿ ಈ ಸಹಾಯಧನ ವಿತರಣೆ ಕಾರ್ಯಕ್ರಮ ನಡೆಯಿತು.
