ಉಡುಪಿ: ನೇಪಾಲ ಮತ್ತು ಟಿಬೆಟ್‌ ಜಲಪ್ರಳಯ- ಜಿಲ್ಲಾಡಳಿತದಿಂದ ತುರ್ತು ಸಹಾಯವಾಣಿ

 


ಉಡುಪಿ/ಕುಶಾಲನಗರ: ನೇಪಾಲ ಮತ್ತು ಟಿಬೆಟ್‌ ಗಡಿಭಾಗದಲ್ಲಿ ಸಂಭವಿಸಿರುವ ಜಲಪ್ರಳಯದಿಂದಾಗಿ ಉಡುಪಿ ಜಿಲ್ಲೆಯಿಂದ ಪ್ರವಾಸ/ಯಾತ್ರೆಗೆ ತೆರಳಿ ಅಲ್ಲಿ ಸಿಲುಕಿರುವವರನ್ನು ಸುರಕ್ಷಿತವಾಗಿ ಕರೆತರಲು ಜಿಲ್ಲಾಡಳಿತ ತುರ್ತು ಕ್ರಮ ಕೈಗೊಳ್ಳುತ್ತಿದ್ದು, ಜಿಲ್ಲಾ ಮಟ್ಟದ ತುರ್ತು ಸಹಾಯವಾಣಿ ತೆರೆಯಲಾಗಿದೆ.

ಸಂಕಷ್ಟದಲ್ಲಿರುವವರ ಹೆಸರು, ವಿಳಾಸ, ಪ್ರಸ್ತುತ ಇರುವ ನಿಖರವಾದ ಸ್ಥಳ, ಮೊಬೈಲ್ ಸಂಖ್ಯೆ, ಇನ್ನಿತರ ವಿವರಗಳನ್ನು ಸಹಾಯವಾಣಿ 1077, : 0820-2574802833 ಸಂಪರ್ಕಿಸುವಂತೆ ಡಿಸಿ ಕಚೇರಿ ಪ್ರಕಟನೆ ತಿಳಿಸಿದೆ.

ಕೊಡಗು ಜಿಲ್ಲೆಯವರು ನೇಪಾಲದ ನೆರೆ ಪ್ರದೇಶದಲ್ಲಿ ಸಿಲುಕಿದ್ದರೆ ಅವರ ಕುಟುಂಬಸ್ಥರು ಜಿಲ್ಲಾ ವಿಪತ್ತು ನಿರ್ವಹಣ ಕೇಂದ್ರಕ್ಕೆ ಮಾಹಿತಿ ನೀಡಬೇಕೆಂದು ಪ್ರಾಧಿಕಾರ ತಿಳಿಸಿದೆ. ದೂರವಾಣಿ:


08272-221077, 08272-221099 :ವಾಟ್ಸಾಪ್ ಸಂಖ್ಯೆ 8550001077