ಸೀನಿಯರ್‌ ಛೇಂಬರ್‌ ಇಂಟರ್ನಾಶನಲ್:‌ ಉಡುಪಿ ಇಂದ್ರಾಳಿ ಘಟಕ ಉದಯ. ಸ್ಥಾಪಕಾಧ್ಯಕ್ಷರಾಗಿ ಮನೋಜ್‌ ಕಡಬ ಪದಗ್ರಹಣ

 


ಉಡುಪಿ: ಆಗಸ್ಟ್‌ 22: ಭಾರತೀಯ ಮೂಲದ ಅಂತರರಾಷ್ಟ್ರೀಯ ವ್ಯಕ್ತಿತ್ವ ವಿಕಸನ ಮತ್ತು ಸೇವಾ ಸಂಸ್ಥೆ ಸೀನಿಯರ್‌ ಛೇಂಬರ್‌ ಇಂಟರ್ನಾಶನಲ್‌ ನ ಕಾರ್ಕಳ ರಾಕ್‌ ಸಿಟಿ ಪ್ರಾಯೋಜಿತ  ನೂತನ ಘಟಕವಾಗಿ ಎಸ್‌ಸಿಐ  ಉಡುಪಿ ಇಂದ್ರಾಳಿ ಘಟಕ ಅಸ್ಥಿತ್ವಕ್ಕೆ ಬಂದಿದೆ. 

ಉಡುಪಿಯಲ್ಲಿ ನಡೆದ ಪದಪ್ರದಾನ ಸಮಾರಂಭದಲ್ಲಿ ಸೀನಿಯರ್‌ ಛೇಂಬರ್‌ ಅಂತರರಾಷ್ಟ್ರೀಯ ಅಧ್ಯಕ್ಷರಾದ ವಾಸುದೇವನ್‌ ಇವರಿಂದ ಮನೋಜ್‌ ಕಡಬ ಅವರು ಚಾರ್ಟರ್‌ ಸ್ವೀಕರಿಸಿದರು. ಸಂಸ್ಥೆಯ ಅಂತರರಾಷ್ಟ್ರೀಯ ಪದಾಧಿಕಾರಿಗಳಾದ ಸುಧಾಕರ್‌ ಪೂಜಾರಿ, ಕುಮಾರ್‌ ಕೂರ್ಸೆ, ಚಿತ್ರಕುಮಾರ್‌ , ಹುಸೈನ್‌ ಹೈಕಾಡಿ ಹಾಗೂ ಕಾರ್ಕಳ ಘಟಕದ ಅಧ್ಯಕ್ಷ ಮೋಹನ್‌ ನಕ್ರೆ, ಜೊತೆ ಕಾರ್ಯದರ್ಶಿ ಶಾಲಿನಿ ಮತ್ತು ಕೋಶಾಧಿಕಾರಿ ಸತೀಶ್‌ ಕರ್ಕೇರ ಮತ್ತಿತರರು ಉಪಸ್ಥಿತರಿದ್ದರು.

ಸಂಸ್ಥೆಯ ಸ್ಥಾಪಕಾಧ್ಯಕ್ಷರಾಗಿ ಮನೋಜ್‌ ಕಡಬ, ಉಪಾಧ್ಯಕ್ಷರಾಗಿ ಸುಬ್ರಮಣ್ಯ ಶೇರಿಗಾರ್‌, ಕಾರ್ಯದರ್ಶಿಯಾಗಿ ಸೆಲ್ವರಾಜ್‌,  ಕೋಶಾಧಿಕಾರಿಯಾಗಿ ಪ್ರೀತಿ ಕಲ್ಯಾಣಪುರ, ಮಹಿಳಾ ವಿಭಾಗದ ನಿರ್ದೇಶಕಿಗಿ ಶೆರ್ಲಿ ಮನೋಜ್‌, ಯುವ ವಿಭಾಗದ ನಿರ್ಧೇಶಕಿಯಾಗಿ  ಸಂಧ್ಯಾ ರಾಜೇಶ್‌, ನಿರ್ದೇಶಕರುಗಳಾಗಿ  ನಾಗರಾಜ ಹೆಬ್ಬಾರ್‌, ಕೃಷ್ಣರಾಜ ತಂತ್ರಿ, ಬಾಸುಮ ಕೊಡಗು, ಶೈನಿ ಸತ್ಯಭಾಮ, ಡಾ. ಜಗದೀಶ ಜೋಗಿ, ಮುರಲೀಧರ ಹೊಸನಗರ ಮತ್ತು ಯುವ ವಿಭಾಗದ ಅಧ್ಯಕ್ಷರಾಗಿ ಝಯಾನ್‌ ಹೈಕಾಡಿ ಅಧಿಕಾರ ಸ್ವೀಕರಿಸಿದರು.