ಕರ್ನಾಟಕ ಒಲಿಂಪಿಕ್ ಸಂಸ್ಥೆ (ಕೆಒಎ) ಅಧ್ಯಕ್ಷರು ಹಾಗೂ ಫಿಬಾ ಏಷ್ಯಾದ ಅಧ್ಯಕ್ಷರಾದ ಡಾ.ಕೆ.ಗೋವಿಂದರಾಜು ಅವರು, ಗುಜರಾತ್ ನ ಅಹಮದಾಬಾದ್ ನಲ್ಲಿ ಭಾನುವಾರ ನಡೆದ ಫಿಬಾ ಏಷ್ಯಾ18 ವಯೋಮಿತಿ ಪುರುಷರ ವಿಭಾಗದಲ್ಲಿ ಪ್ರಶಸ್ತಿ ಜಯಿಸಿದ ಆಸ್ಟ್ರೇಲಿಯಾ ತಂಡಕ್ಕೆ ಟ್ರೋಫಿ ಪ್ರದಾನ ಮಾಡಿದರು. ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ 89-79 ರಿಂದ ಚೀನಾ ತಂಡವನ್ನು ಸೋಲಿಸಿತು.

