ಉಡುಪಿ: ಬ್ರಾಹ್ಮಿ ಮೋಟರ್ಸ್ ನಿಂದ ಇಂಡಿಪೆಂಡೆನ್ಸ್ ಡೇ ರೈಡ್ - 120 ಸದಸ್ಯರು ಭಾಗಿ

 


ಉಡುಪಿ: ಉಡುಪಿಯ ಬ್ರಾಹ್ಮಿ ಮೋಟರ್ಸ್ ಸ್ವಾತಂತ್ರ್ಯ ಮಹೋತ್ಸವ ಪ್ರಯುಕ್ತ ಇಂಡಿಪೆಂಡೆನ್ಸ್ ಡೇ ರೈಡ್ ಆಯೋಜಿಸಿದ್ದು 120 ಸದಸ್ಯರು ಭಾಗಿಯಾದರು. ಇದಕ್ಕೂ ಮುನ್ನ ಸಂಸ್ಥೆಯ ವಠಾರದಲ್ಲಿ ಸ್ವಾತಂತ್ರ್ಯೋತ್ಸವ ಧ್ವಜಾರೋಹಣ ನೆರವೇರಿತು.



ಟ್ರಾಫಿಕ್ ಎಸ್ಸೈ  ಹುಸೈನ್  ಧ್ವಜಾರೋಹಣ ನೆರವೇರಿಸಿದರು. ಬ್ರಾಹ್ಮಿ ಮೋಟಾರ್ಸ್ ಮಾಲಕ ಸೈಫುಲ್ಲ ಉಪಸ್ಥಿತರಿದ್ದು ,ಮುಹಮ್ಮದ್ ಫಾರೂಕ್ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. 





ಬಳಿಕ ರಾಲಿಯಲ್ಲಿ ಸುಮಾರು 99 ಬೈಕ್ ಗಳಿದ್ದು 120 ಸದಸ್ಯರು ಪಾಲ್ಗೊಂಡರು. ರಾಯಲ್ ಎನ್ ಫೀಲ್ಡ್ ನ ಈ ಬೃಹತ್ ರ್ಯಾಲಿಯಲ್ಲಿ ಸಾಕಷ್ಟು ಯೂಟ್ಯೂಬರ್ ಗಳೂ ಭಾಗಿಯಾದರು.





ಬ್ರಾಹ್ಮಿ‌ ಮೋಟಾರ್ಸ್  ನಿಂದ ಹೊರಟ  ಬೈಕ್  ರಾಲಿಯು ಅಂಬಾಗಿಲು ಪೆರಂಪಳ್ಳಿ ಮೂಲಕ ಸಾಗಿ ಮಣಿಪಾಲ ಜಿಲ್ಲಾಧಿಕಾರಿ ಕಚೇರಿ ತಲುಪಿತು.ಬಳಿಕ ಉಡುಪಿ ಕಿನ್ನಿಮೂಲ್ಕಿ‌ ಮೂಲಕ ಶೋರೂಂ ತಲುಪಿತು. ಬೈಕ್ ರೈಡರ್ ಗಳಿಗೆ ಆಕರ್ಷಕ ಟಿಷರ್ಟ್ , ಉಪಹಾರ ಮತ್ತಿತರ ವ್ಯವಸ್ಥೆ ಮಾಡಲಾಗಿತ್ತು.ಉಡುಪಿ ಟ್ರಾಫಿಕ್ ಪೋಲೀಸರ ಸಹಕಾರದಿಂದ ರ್ಯಾಲಿಯು ಯಶಸ್ವಿಯಾಗಿ ನೆರವೇರಿತು.