ಉಡುಪಿ: ಸಶಸ್ತ್ರ ಮೀಸಲು ಪಡೆ ಎಸ್ಸೈ ನಾಗೇಶ್ ಎಂ. ಕ್ಯಾನ್ಸರ್ ಕಾಯಿಲೆಗೆ ಬಲಿ



ಉಡುಪಿ: ಸಶಸ್ತ್ರ ಮೀಸಲು ಪಡೆ ಎಸ್ಸೈ ನಾಗೇಶ್ ಎಂ ಅವರು ಕ್ಯಾನ್ಸರ್ ನಿಂದ ಸಾವನ್ನಪ್ಪಿದ್ದಾರೆ.

 ಇವರು ಕೆಲವು ಸಮಯದಿಂದ ಕ್ಯಾನ್ಸರ್‌ ಕಾಯಿಲೆಯಿಂದ ಬಳಲುತ್ತಿದ್ದರು.ನಾಗೇಶ್ , ಮೂಲತಃ ಪದ್ಮನೂರು,ಕಿನ್ನಿಗೋಳಿ, ಮಂಗಳೂರವರಾಗಿದ್ದು, ಪ್ರಸ್ತುತ ಉಡುಪಿಯಲ್ಲಿ ವಾಸಿಸುತ್ತಿದ್ದಾರೆ. 10/10/1996ರಲ್ಲಿ ಮಂಗಳೂರಿನ ಡಿಎಆರ್‌ನಲ್ಲಿ ನೇಮಕಾತಿ ಹೊಂದಿದ ಬಳಿಕ, ಹೊಸದಾಗಿ ಉಡುಪಿ ಜಿಲ್ಲೆ ರಚನೆಯಾದ ಸಮಯದಲ್ಲಿ ಉಡುಪಿ ಜಿಲ್ಲೆಗೆ ವರ್ಗಾವಣೆಗೊಂಡಿದ್ದರು. ಬಳಿಕ 2016ರಂದು ಪದೋನ್ನತಿ ಹೊಂದಿ ಎಆರ್‌ಎಸ್‌ಐ ಹುದ್ದೆ ಪಡೆದಿದ್ದರು. ಇವರು ಪತ್ನಿ ಮತ್ತು ಎರಡು ಮಕ್ಕಳನ್ನು ಅಗಲಿದ್ದಾರೆ.