ಕುಂದಾಪುರ: ದ್ವಿಚಕ್ರ ವಾಹನ ಸವಾರನ ಮೇಲೆ ಕಾಡುಕೋಣ ದಾಳಿ- ಗಂಭೀರ ಗಾಯ

 

ಸಾಂದರ್ಭಿಕ ಚಿತ್ರ

ಸಿದ್ದಾಪುರ: ಸಿದ್ದಾಪುರದ ಹೊಸಂಗಡಿ ಸಮೀಪ ದ್ವಿಚಕ್ರ ವಾಹನದಲ್ಲಿ ಮನೆಗೆ ಹೋಗುತ್ತಿದ್ದ ವ್ಯಕ್ತಿಯ ಮೇಲೆ ಕಾಡುಕೋಣವೊಂದು ದಾಳಿ ನಡೆಸಿ ಗಾಯಗೊಳಿಸಿದ ಘಟನೆ ನಡೆದಿದೆ. ತೊಂಬಟ್ಟು ಕಲ್ಮಕ್ಕಿ ಶ್ರೀನಿವಾಸ್ ನಾಯಕ್‌ ದಾಳಿಗೆ ಒಳಗಾದವರು.

ರಿಕ್ಷಾ ಚಾಲಕರು ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿದ್ದಾಗಿ ತಿಳಿದುಬಂದಿದೆ. ಈ ಬಗ್ಗೆ ಮಾಹಿತಿ ಪಡೆದ ಶಂಕರನಾರಾಯಣ ವಲಯ ಅರಣ್ಯಧಿಕಾರಿ ಸಂದೇಶ ಅವರು ಗಸ್ತು ಅರಣ್ಯ ಪಾಲಕರನ್ನು ಮಣಿಪಾಲ ಆಸ್ಪತ್ರೆಗೆ ಕಳುಹಿಸಿ ಮಾಹಿತಿ ಪಡೆದರು.ಅವರ ಮನೆಯವರಿಗೆ ಇಲಾಖೆಯಿಂದ ಸಿಗುವ ಸವಲತ್ತುಗಳ ಬಗ್ಗೆ ತಿಳಿಸಿ ಸಮಾಧಾನಪಡಿಸಿದರು ಎಂದು ತಿಳಿದುಬಂದಿದೆ.