ಕುಂದಾಪುರ: ಕುಸಿದುಬಿದ್ದು ಕೇರಳ ಮೂಲದ ಯುವಕ ಸಾವು

 

ಸಾಂದರ್ಭಿಕ ಚಿತ್ರ

ಕುಂದಾಪುರ: ಮೂಡ್ಲಕಟ್ಟೆಯ ರೈಲು ನಿಲ್ದಾಣದ ಕಡೆಗೆ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬರು ಕುಸಿದು ಬಿದ್ದು, ಸಾವನ್ನಪ್ಪಿದ ಘಟನೆ ಸಂಭವಿಸಿದೆ.ವ್ಯಕ್ತಿ ಕುಸಿದು ಬಿದ್ದು, ಬಾಯಲ್ಲಿ ನೊರೆ ಬರುತ್ತಿತ್ತು. ಕೂಡಲೇ ಅಲ್ಲಿದ್ದವರೆಲ್ಲ ಉಪಚರಿಸಿದರೂ, ಅಷ್ಟರೊಳಗೆ ಸಾವನ್ನಪ್ಪಿರುವುದು ದೃಢಗೊಂಡಿತು. ಇವರು ಹೃದಯಾಘಾತದಿಂದ ಅಥವಾ ಯಾವುದೋ ಸಮಸ್ಯೆಯಿಂದ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. ಅವರ ಬಳಿಯಿದ್ದ ದಾಖಲೆಯನ್ನು ಪರಿಶೀಲಿಸಿದಾಗ ಇವರು ಕೇರಳ ಮೂಲದ ಅಬ್ದುಲ್ ಗಫೂರ್ ಅವರ ಪುತ್ರ ಫೈಯಸ್ ವಿ.ವಿ. (35) ಎಂದು ಗುರುತಿಸಲಾಗಿದೆ.

ಕೋಣಿಯ ಗಿರೀಶ ಪೂಜಾರಿ ನೀಡಿದ ದೂರಿನಂತೆ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.